ಅವನು ಬಿನಿಶ್ : ನಂಬಿದ ಬಿಲ್ಡರ್ ಫಿನಿಷ್
ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಎಲ್ಲ ಹೇಗಿದ್ದೀರಿ..?
ಥಟ್ಟಂತ ನೋಡಿದ್ರೆ ವಿಷ ಬೆರೆಸಿರೊ ಬಜ್ಜಿ ತಿಂದು ಸಾಯೊಕ್ಕೂ ಆಗದೆ, ಬದುಕೊಕ್ಕು ಆಗದೆ ಇರೊ ಹೆಗ್ಗಣದ ತರ ಕಾಣೊ ಇವನ ಹೆಸರು ಬಿನಿಶ್ ಥಾಮಸ್. ತಮಿಳು ಕ್ರಿಶ್ಚಿಯನ್. ಒಂದು ಕಾಲದಲ್ಲಿ ಬನ್ನಿಗಿದ್ದರೆ ಟೀಗಿಲ್ಲ.., ಟೀಗಿದ್ದರೆ ಬನ್ನಿಗಿಲ್ಲ ಎಂಬಂತಿದ್ದ. ಯಾರೇ ಸಿಕ್ಕಿದರು ಸಾರ್ ಹಾಫ್ ಟೀ, ಒಂದು ಬನ್ನು ಕೊಡ್ಸಿ ಅಂಥ ಗೋಗರಿತಿದ್ದ. ಕೆಲ ಕಾಲ ಈಜಿಪುರದ ಬಳಿ ಇರುವ ಸೆಂಟ್ ಮೇರಿ ಚರ್ಚ್ ಮುಂದೆ ಪ್ರೈಸ್ ದ ಲಾರ್ಡ್, ದೇವರಿಗೆ ಹೆದರಿ ಕೊಲ್ಲಿ ಅಂಥ ಮೊಂಬತ್ತಿ ಮಾರ್ತ ಇದ್ದ. ಇವನ ದೈನೇಸಿ ಸ್ಥಿತಿ, ಹರಕು ಚೆಡ್ಡಿ ಅದರಲ್ಲೂ ಮುಖ್ಯವಾಗಿ ಆ ಚೆಡ್ಡಿಯಿಂದ ಇಣಕುತ್ತಿದ್ದ ಹೆಗ್ಗಣ ಕಚ್ಚಿದ್ದ ಕಾರ ಬನ್ನಿನ್ನಂತಿದ್ದ ಇವನ ಅಂಡನ್ನು ನೋಡಲಾಗದೆ ಪುಣ್ಯಾತ್ಮರೊಬ್ಬರು ಒಂದೆರಡು ಜೊತೆ ಬಟ್ಟೆ ಕೊಡಿಸ್ತಾರೆ. ಆ ಬಟ್ಟೆಗಳನ್ನು ಹಾಕಿಕೊಂಡಿದ್ದೆ ತಡ ಈ ಬೆಗ್ಗರ್ನ ಲೈಫೆ ಚೆಂಜ್ ಆಗುತ್ತೆ. ಆ ಸಮಯದಲ್ಲಿ ಈಜಿಪುರದಲ್ಲಿ ಸ್ಲಂ ಬೋರ್ಡ್ನಿಂದ ಗುಡಿಸಲು ನಿವಾಸಿಗಳಿಗಾಗಿ ಕಟ್ಟಡ ಕಟ್ಟುವ ಕಾಮಗಾರಿ ಶುರುವಾಗಿರುತ್ತೆ. ಇವನು ಅಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿದ್ದ ಜನರ ಬಳಿ ಹೋಗಿ “ನಂಗೆ ಸ್ಲಂ ಬೋರ್ಡ್ ಅಧಿಕಾರಿಗಳೆಲ್ಲ ತುಂಬಾ ಕ್ಲೋಜು ನಿಮಗೆಲ್ಲ ಅಲ್ಲಿ ಮನೆ ಕೊಡಿಸ್ತೆನೆ ಅಂಥ ಅವರಿಗೆಲ್ಲ ಆಸೆ ಹುಟ್ಟಿಸಿ ಅವರಿಂದ ಒಂದಷ್ಟು ದುಡ್ಡು ಗುಂಜಿಕೊಂಡು ಅಲ್ಲಿಂದ ಎಸ್ಕೆಪ್ ಆಗುತ್ತಾನೆ.
ಹೀಗೆ ಅಲ್ಲಿಂದ ಎಸ್ಕೆಪ್ ಆದ ಇವನು ಸೀದಾ ವಕ್ಕರಿಸಿದ್ದೆ ಹಳೇ ವಿಮಾನ ನಿಲ್ದಾಣದ ಹೆಚ್.ಎ.ಎಲ್. ಬಳಿ.
ಅದು ಹೇಗೊ ಏನೊ ದಿನಕ್ಕೊಂದು ಹೈ ಫೈ ಕಾರಿನಲ್ಲಿ ಈ ಜಾಗಾದಲ್ಲಿ ಠಳಾಯಿಸ ತೊಡಗಿದ ಇವನು ಕೈರಾಳಿ, ಲಾರೆನ್ಸ್, ಸುರೆಶ್ ಜೈನ್, ಸ್ಯಾಮ್ಯುಲ್ ಇನ್ನು ಮುಂತಾದ ಬಿಲ್ಡರ್’ಗಳಿಂದ ಹೆಚ್.ಎ.ಎಲ್. ಜಾಗ ತೋರಿಸಿ ಈ ಜಾಗ ತನ್ನದೆಂದು ಇದನ್ನು ಜೆ.ವಿ(ಜಾಯಿಂಟ್ ವೆಂಚರ್)ಕೊಡ್ತಿನಿ, 99 ವರ್ಷ ಲೀಸಿಗೆ ಕೊಡ್ತಿನಿ ಅಂಥ ಹೇಳಿ ಅವರಿಂದ ಮುಂಗಡ ಹಣ ಪಡೆದು ಅವರಿಗೆಲ್ಲ ತಿರುನೆಲ್ವೆಲಿ ಹಲ್ವಾ ತಿನ್ಸಿದ್ದಾನೆ. ಲೆಕ್ಕಕ್ಕೆ ಸಿಕ್ಕಿರುವ ಪ್ರಕಾರ ಇವನು ಈ ರೀತಿ ಮುಂಡಾಯ್ಸಿದ್ದು ಇಪ್ಪತ್ತಕ್ಕೂ ಹೆಚ್ಚು ಮಂದಿಗೆ.
ಪೊಲೀಸರಿಗೆ ಅದ್ಯಾವ ಕೇಕು ತಿನ್ಸಿದ್ದಾನೊ ಏನೋ ಅವರುಗಳು ಇವನನ್ನು ಕಂಡೊಡನೆ ಸಾಕ್ಷಾತ್ ಜೀಸಸ್ನ ಜೇಷ್ಟ ಪುತ್ರನೆ ಬಂದನೊ ಎನೋ ಎಂಬಂತೆ ಅಡ್ಡಡ್ಡ ಬೀಳುತ್ತಾರೆ. ಇಂಥಹ ಖದೀಮನನ್ನು ಶಿಲುಬೆಗೆ ಎರಿಸುವವರು ಯಾರು ಎಂದು ಮೋಸ ಹೋದ ಬಿಲ್ಡರುಗಳು ಕಣ್ ಕಣ್ ಬಿಡುತ್ತಿದ್ದಾರೆ. ಇವನಿಂದ ಇನ್ನಷ್ಟು ಜನ ಮೊಸ ಹೋಗುವುದಕ್ಕಿಂತ ಮುಂಚೆ ಕರ್ನಾಟಕ ಪೊಲೀಸರು ಇವನಿಗೆ ಶ್ರೀಕೃಷ್ಣನ ಜನ್ಮ ಸ್ಥಳಕ್ಕೆ ಸೇರಿಸ ಬೇಕಾಗಿದೆ.