ಬೆಂಗಳೂರು ನಗರ

ಸಚಿವ ಕೆ.ಗೋಪಾಲಯ್ಯ ಪರ ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ ರೋಡ್ ಶೋ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದದಲ್ಲಿಂದು ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅಣ್ಣಾಮಲೈ ರವರಿಂದ ರೋಡ್ ಶೋ ಕಾರ್ಯಕ್ರಮವುದಲ್ಲಿ ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ನವರು ಮಾತನಾಡಿದರು.

ರೋಡ್ ಶೋ ಕಾರ್ಯಕ್ರಮವು ಡಾ.ರಾಜಕುಮಾರ್ ಪ್ರತಿಮೆ ಬಳಿಯಿಂದ ಜೆಸಿ ನಗರ, ಕುರುಬರಹಳ್ಳಿ ಸರ್ಕಲ್ ಮಾರ್ಗವಾಗಿ ಸತ್ಯನಾರಾಯಣ ಚೌಲ್ಟ್ರಿ ಸರ್ಕಲ್ ವರೆಗೆ ನಡೆಯಿತು.

ಕ್ಷೇತ್ರದಲ್ಲಿ ಈವರೆಗೆ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರಿಗೆ ಅರಿತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಂಡು ತಮ್ಮೆಲ್ಲರ ಕಲ್ಯಾಣಕ್ಕೆ ಸದಾ ಶ್ರಮಿಸುತ್ತೇನೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ನನಗೆ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಜನಸಾಮಾನ್ಯರಿಗೆ ಕೋವಿಡ್ ಅವಧಿಯಲ್ಲಿ, ಉಚಿತವಾಗಿ ಆರೋಗ್ಯ ಕಿಟ್ ಹಾಗೂ ಆಹಾರ ಕಿಟ್, ಆಕ್ಸಿಜನ್, ಮಾತ್ರೆಗಳನ್ನು ನೀಡಿ ಜನಸಾಮಾನ್ಯರ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನ ಜೊತೆ ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಕ್ಷೇತ್ರದ ಜನರ ಉಳಿವಿಗಾಗಿ ಬಹಳ ಕಾಳಜಿ ವಹಿಸಲಾಗಿದೆ ಎಂದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಜನಸಾಮಾನ್ಯರ ಅನುಕೂಲವಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮೂರು ಬಾರಿ ಶಾಸಕನಾಗಿ ತಮ್ಮೆಲ್ಲರ ಆಶೀರ್ವಾದ ಹಾಗೂ ಹೆಚ್ಚಿನ ಸಹಕಾರದಿಂದ ರಾಜ್ಯದ ಅಬಕಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಇದಕ್ಕೆ ಕಾರಣರಾದ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕೋವಿಡ್ ಸಂದರ್ಭದಲ್ಲಿ ಇತರ ಪಕ್ಷಗಳು ಕ್ಷೇತ್ರದ ಜನತೆಗೆ ಆಶ್ರಯವಾಗಲಿಲ್ಲ. ಅಂದಿನ ದಿನದಲ್ಲಿ ಜನಸಾಮಾನ್ಯರಿಗೆ 350ಕ್ಕೂ ಹೆಚ್ಚಿನ ಆಕ್ಸಿಜನ್ ಹಾಗೂ ಲಸಿಕೆಯನ್ನು ನೀಡಿ ಕ್ಷೇತ್ರದ ಜನರ ಕಲ್ಯಾಣಕ್ಕೆ ಹಗಲಿರಲು ಶ್ರಮಿಸಿದ್ದೇನೆ ಎಂದು ಹೇಳಿದರು.

ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಘಟಕ, ನಮ್ಮ ಕ್ಲಿನಿಕ್, ನವ ನಂದಿನಿ ಪಾರ್ಕ್, ಗುಣಮಟ್ಟದ ಕಾಮಗಾರಿಯ ರಸ್ತೆಗಳು, ಕೃಷ್ಣಾನಂದ ನಗರದಲ್ಲಿನ ಶಾಲೆಗಳು, ಬ್ಯಾಡ್ಮಿಂಟನ್ ಕೋರ್ಟ್, ಸರ್ಕಾರಿ ಶಾಲೆಗಳು, ಮಹಾನಗರ ಪಾಲಿಕೆಗಳ ಶಾಲೆಗಳು, ಉದ್ಯಾನವನ, ರಾಣಿ ಅಬ್ಬಕ್ಕ ದೇವಿ ಕ್ರೀಡಾಂಗಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಇದು ರೋಡ್ ಶೋ ಅಲ್ಲ ಗೋಪಾಲಯ್ಯನವರ ವಿಜಯೋತ್ಸವ: ಅಣ್ಣಾಮಲೈ

ಕ್ಷೇತ್ರದಲ್ಲಿ ಇಂದು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ನೋಡಿದರೆ ಇದು ರೋಡ್ ಶೋ ಅಲ್ಲ. ಗೋಪಾಲಯ್ಯ ನವರ ವಿಜಯೋತ್ಸವದಂತೆ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅಣ್ಣಾಮಲೈ ಅವರು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಈ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸಿ ಎರಡು ಗಂಟೆಗಳ ಕಾಲ ನಮ್ಮ ಜೊತೆಗೆ ರೋಡ್ ಶೋನಲ್ಲಿ ಪಾಲ್ಗೊಂಡು ಹೆಚ್ಚಿನ ಬೆಂಬಲವನ್ನು ನೀಡುತ್ತಿರುವುದು ಬಹಳ ಸಂತಸವಾಗಿದೆ ಎಂದರು.

ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಕ್ಷೇತ್ರದ ಜನತೆ ಬಿಜೆಪಿಗೆ ಹಾಗೂ ಗೋಪಾಲಯ್ಯನವರಿಗೆ ಹೆಚ್ಚಿನ ಮತ ನೀಡಿ ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮೇಯ ಎಸ್. ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದಮೂರ್ತಿ ನಾಗರಾಜ್, ಜಯರಾಮ್, ಶ್ರೀನಿವಾಸ್, ಮಹದೇವು, ಡಾ. ಗಿರೀಶ್ ನಾಶಿ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button