ಆದ್ಯಾತ್ಮ

ಹುಟ್ಟಿದ ವಾರವೂ ವ್ಯಕ್ತಿಯ ಗುಣ-ನಡತೆ ಹೇಳುತ್ತದೆ

ಸೋಮವಾರ

ಈ ದಿನದಂದು ಹುಟ್ಟಿದವರು ಸಾಮಾನ್ಯವಾಗಿ ಸ್ವಪ್ರಶಂಸಕರಾಗಿದ್ದು ಉಳಿದವರನ್ನೆಲ್ಲಾ ದ್ವೇಶಿಸುವ ಮನೋಭಾವ ಹೊಂದಿರುತ್ತಾರೆ. ಆದರೆ ಕೆಲವು ಅಪವಾದ ಎಂಬಂತೆ ಈ ದಿನ ಹುಟ್ಟಿರುವವರಲ್ಲಿ ಕೆಲವರು ಅತ್ಯಂತ ಪ್ರೇಮಮಯಿಗಳಾಗಿರುತ್ತಾರೆ. ಇವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುವವರೂ, ಕ್ರಿಯಾತ್ಮಕರೂ, ತಮ್ಮ ವಿಚಾರಗಳನ್ನು ತಮ್ಮೊಂದಿಗೇ ಇಟ್ಟುಕೊಳ್ಳುವವರೂ ಆಗಿರುತ್ತಾರೆ. ಇವರು ಯಸಸ್ಸನ್ನು ಹಿಂಬಾಲಿಸಿಕೊಂಡು ಹೋಗುವವರೂ, ನಾಯಕತ್ವದ ಗುಣಗಳನ್ನು ಹೊಂದಿರುವವರೂ ಆಗಿದ್ದಾರೆ.

ಮಂಗಳವಾರ

ಇವರು ಕುತೂಹಲಕಾರಿ ವ್ಯಕ್ತಿಗಳಾಗಿದ್ದು ತಮ್ಮ ಬಗ್ಗೆ ಬರುವ ಅಭಿಪ್ರಾಯಗಳನ್ನು ಅತಿ ಗಂಭೀರವಾಗಿ ಪರಿಗಣಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಒಂದು ಗುರಿಯನ್ನು ಹೊಂದಿದ್ದು ಆ ಗುರಿಯನ್ನು ಪಡೆಯಲು ತಮ್ಮ ಪೂರ್ಣ ಸಾಮರ್ಥ್ಯವನ್ನು ಮುಡಿಪಾಗಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಒಲವು ನೀಡುವ ಇವರು ಸಾಮಾನ್ಯವಾಗಿ ತಮ್ಮ ಕೆಲಸದ ಬಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ.

ಬುಧವಾರ

ಈ ದಿನ ಹುಟ್ಟಿದವರು ತಮ್ಮ ಕೆಲಸವನ್ನು ಇಷ್ಟಪಟ್ಟರೂ ಆರಾಮವಾಗಿ ಮಗಿಸುವಂತಹವರಾಗಿದ್ದಾರೆ. ಇವರು ತಾವಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ಕೈಕೆಳಗಿನ ವ್ಯಕ್ತಿಗಳಿಂದ ಪೂರ್ಣಪ್ರಮಾಣದ ಕೆಲಸವನ್ನು ಮಾಡಿಸಿಕೊಳ್ಳುವ ಗುಣ ಹೊಂದಿದ್ದು ಇದಕ್ಕಾಗಿ ತಮ್ಮ ಸ್ನೇಹ ಆದರಗಳನ್ನು ಬಳಸುತ್ತಾರೆ. ಇವರು ಸಮಾಜದ ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ಇತರರಿಗಿಂತ ಸುಲಭವಾಗಿ ಸ್ನೇಹ ಸಂಪಾದಿಸಿಕೊಳ್ಳುತ್ತಾರೆ.

ಗುರುವಾರ

ಈ ದಿನ ಹುಟ್ಟಿದ ಜನರು ಸಾಮಾನ್ಯವಾಗಿ ಇತರರಿಂದ ಪ್ರಶಂಸೆ ಪಡೆಯುವವರಾಗಿರುತ್ತಾರೆ. ಇವರು ಆಕರ್ಷಕ ವ್ಯಕ್ತಿತ್ವ ಹೊಂದಿದ್ದು ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ. ಇವರು ಒಂಟಿಯಾಗಿ ಕೆಲಸ ಮಾಡಲು ಇಚ್ಛಿಸುವವರಾಗಿದ್ದು ಸದಾ ಆಶಾವಾದಿಗಳಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಜನರಿಗೆ ಅತಿ ಹೆಚ್ಚಿನ ಗೌರವ ನೀಡುತ್ತಾರೆ ಹಾಗೂ ಗೌರವ ಪಡೆಯಲು ಇಚ್ಛಿಸುತ್ತಾರೆ.

ಶುಕ್ರವಾರ

ಶುಕ್ರವಾರ ಜನಿಸಿದ ಜನರು ಕ್ರಿಯಾತ್ಮರಾಗಿರುತ್ತಾರೆ. ಇವರು ಅಪಾರ ಬುದ್ಧಿಮತ್ತೆಯುಳ್ಳವರಾಗಿದ್ದು ತಮ್ಮ ಸ್ನೇಹವೃಂದದಲ್ಲಿ ಪ್ರಮುಖ ಪಾತ್ರ ಪಡೆಯುತ್ತಾರೆ. ಇವರಿಗೆ ಅಪಾರವಾದ ದೂರದೃಷ್ಟಿ ಮತ್ತು ಒಳ ಅರಿವು ಸಹಾ ಜನ್ಮತಃ ಬಂದಿರುತ್ತದೆ.

ಶನಿವಾರ

ಈ ದಿನ ಹುಟ್ಟಿದವರು ಅತಿ ಹೆಚ್ಚಿನ ಆತ್ಮ ವಿಶ್ವಾಸ ಉಳ್ಳವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಇವರು ಚಿಕ್ಕಪುಟ್ಟ ಸೋಲುಗಳಿಗೂ ತೀರಾ ಹತಾಶೆ ವ್ಯಕ್ತಪಡಿಸಿ ಹಿಮ್ಮೆಟ್ಟುತ್ತಾರೆ. ಇವರು ಸಾಮಾನ್ಯವಾಗಿ ಹೊಸ ವಿಚಾರಗಳಿಗೆ ಸ್ಪಂದಿಸದೇ ಬದಲಿಗೆ ಋಣಾತ್ಮಕ ಸಲಹೆಗಳನ್ನೇ ನೀಡುತ್ತಾರೆ. ಇವರು ತಮ್ಮ ರೂಪ ಲಾವಣ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕೊಂಚ ಕುಟಿಲರೂ ಆಗಿರುತ್ತಾರೆ.

ಭಾನುವಾರ

ಈ ದಿನ ಹುಟ್ಟಿದ ವ್ಯಕ್ತಿಗಳು ಅತಿ ಆಶಾವಾದಿಗಳಾಗಿದ್ದು ಭಿನ್ನ ಸಂದರ್ಭಗಳಲ್ಲಿ ಭಿನ್ನವಾಗಿ ಪ್ರತಿಕ್ರಿಯಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಚಿಂತನೆ ಹೊಂದಿದ್ದು ಸದಾ ನಗುತ್ತಲೇ ಇರುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸಮಾಜದಲ್ಲಿರಲು ಇಷ್ಟ ಪಡುವಂತೆಯೇ ಕೊಂಚ ಕಾಲ ಏಕಾಂತದಲ್ಲಿಯೂ ಇರಲು ಇಚ್ಛಿಸುತ್ತಾರೆ.

Related Articles

Leave a Reply

Your email address will not be published. Required fields are marked *

Back to top button