ಬೆಂಗಳೂರು ನಗರ

ಕ್ಷೇತ್ರದ ಜನರ ಪರವಾಗಿ ದುಡಿಯಲು ಸದಾ ಸಿದ್ಧ: ಸಚಿವ ಕೆ.ಗೋಪಾಲಯ್ಯ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2013-18-19ರಲ್ಲಿ ನನಗೆ ಹೆಚ್ಚಿನ ಸಹಕಾರ ನೀಡಿ ಬಹುಮತ ದಿಂದ ಶಾಸಕನಾಗಿ ಆಯ್ಕೆ ಮಾಡಿದ್ದೀರಿ ನಿಮ್ಮೆಲ್ಲರ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಕ್ಷೇತ್ರದ ಜನರ ಪರವಾಗಿ ದುಡಿಯಲು ಸದಾ ಸಿದ್ಧನಿದ್ದೇನೆ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನಲ್ಲಿ ಪ್ರಮುಖ ಮುಖಂಡರೊಂದಿಗೆ ಬೂತ್ ಮಟ್ಟದ ಸಭೆ ನಡೆಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ನನಗೆ ಕಳೆದ ಮೂರು ಬಾರಿ ಉತ್ತಮವಾದ ಬಹುಮತ ನೀಡಿ ಈ ಕ್ಷೇತ್ರದ ಶಾಸಕನಾಗಿ ಹಾಗೂ ರಾಜ್ಯದ ಸಚಿವನಾಗಿ ಆಯ್ಕೆಯಾಗಲು ತಾವೆಲ್ಲರೂ ಮೂಲ ಕಾರಣಕರ್ತರಾಗಿದ್ದೀರಿ ಹಾಗಾಗಿ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಬಡಾವಣೆಯು 2013 ರಿಂದ 2023 ರವರೆಗೆ ಆಗಿರುವಂತಹ ಅನೇಕ ಬದಲಾವಣೆಗಳನ್ನು ಪ್ರತಿದಿನ ತಾವೆಲ್ಲರೂ ಗಮನಿಸುತ್ತಿದ್ದೀರಿ ಎಂದು ಹೇಳಿದರು.

ಕ್ಷೇತ್ರದಲ್ಲಿ ಆರಂಭದ ದಿನಗಳಲ್ಲಿ ನೀರಿನ ಅಭಾವ ಬಹಳಷ್ಟು ಇತ್ತು. ನೀರಿನ ಸಮಸ್ಯೆ ನಮಗೆ ದೊಡ್ಡ ಸಮಸ್ಯೆಯಾಗಿದೆ ಎಂದು ತಿಳಿಸಿದರು. ಆದರೆ ನೀರಿನ ಸಮಸ್ಯೆ ಇಲ್ಲದ ಹಾಗೆ ಕಾರ್ಯನಿರ್ವಹಿಸಿದ್ದೇನೆ. ರಸ್ತೆಯ ಸಮಸ್ಯೆಯನ್ನು ಸರಿಪಡಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ನವ ನಂದಿನಿ ಪಾರ್ಕ್ ಹಾಗೂ ಇನ್ನಿತರ ಪಾರ್ಕಗಳನ್ನು ನಿರ್ಮಾಣ ಮಾಡಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ನಾಲ್ಕು ಶಾಲೆಗಳನ್ನ ತೆರೆಯಲಾಗಿದೆ ಎಂದರು.

ಕಳೆದ ವರ್ಷದಿಂದ 7 ಸಾವಿರ ವಿದ್ಯಾರ್ಥಿಗಳು ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಸ್ ಎಸ್ಎಲ್ ಸಿ ವರೆಗೆ ಇದ್ದು , ಈ ವರ್ಷ ಪಿಯುಸಿಯನ್ನು ಪ್ರಾರಂಭಿಸಿ ಎಲ್ಲಾ ರೀತಿಯ ಮೂಲ ಸೌಕರ್ಯ ದೊಂದಿಗೆ ಸರ್ಕಾರಿ ಶಾಲೆ ಉತ್ತಮವಾಗಿ ಮಾಡಿದ್ದೇವೆ ಎಂದರು.

ಕೋವಿಡ್ ಅವಧಿಯಲ್ಲಿ 350 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.

ನಮ್ಮ ಕ್ಲಿನಿಕ್ ನಲ್ಲಿ ಉಚಿತವಾಗಿ ಪರೀಕ್ಷೆ ಮಾಡಿ ಹಾಗೂ ಟಾಬ್ಲೆಟ್ ಗಳನ್ನು ಕೊಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ.
ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಕ್ಲಿನಿಕ್ ತರಲಾಗಿದೆ. ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸಭೆಯಲ್ಲಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶ್ರೀನಿವಾಸ್, ಹನುಮಂತಯ್ಯ, ನಾರಾಯಣಸ್ವಾಮಿ, ವಾರ್ಡ್ ಅಧ್ಯಕ್ಷ ಲೋಕೇಶ್, ರಾಘವೇಂದ್ರ, ಪ್ರಸನ್ನ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಜೇಂದ್ರ ಕುಮಾರ್, ರಾಮಕೃಷ್ಣ, ಶಶಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button