ಇದು ಸರ್ಕಾರಿ ಆಸ್ಪತ್ರೆಯೋ.. ಅಥವಾ ಖಾಸಗಿ ಆಸ್ಪತ್ರೆಯೋ.?
ನಂಜನಗೂಡು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಂದ ಲಂಚ ತೆಗೆದುಕೊಳ್ಳುತ್ತಿರುವ ಆರೋಗ್ಯ ಸಿಬ್ಬಂದಿಗಳ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಹಿಳೆಯೊಬ್ಬರಿಂದ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಗೆ 350 ರೂ. ಕ್ಷ ಕಿರಣಕ್ಕೆ 50 ರೂ. ಬ್ಲೆಡ್ ಡ್ರಾ ಮಾಡಲು 60 ರೂಪಾಯಿ ಸುಮಾರು 460 ರೂಪಾಯಿಗಳನ್ನು ಆರೋಗ್ಯ ಸಿಬ್ಬಂದಿಗಳಾದ ರೇಷ್ಮಾ ಮತ್ತು ರೇಣುಕಾ ಆರಾಧ್ಯ ಲಂಚದ ರೂಪದಲ್ಲಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ.
ದಿನನಿತ್ಯ ಇದೇ ರೀತಿ ಆಸ್ಪತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಬರುವ ತಾಯಿ ಮತ್ತು ಮಕ್ಕಳು ಹಾಗೂ ರೋಗಿಗಳ ಹತ್ತಿರ ಸಾವಿರಾರು ಹಣವನ್ನು ಪಡೆಯುತ್ತಿದ್ದು, ಬಡ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಶಿವಪ್ರಸಾದ್ ಅವರಿಗೆ ದೂರು ಸಲ್ಲಿಸಲಾಗಿದೆ.
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಂದ ಸಾವಿರಾರು ರೂಪಾಯಿಗಳನ್ನು ಪೀಕುತಿದ್ದಾರೆ. ಥೈರಾಯ್ಡ್ ಪರೀಕ್ಷೆ ಯಂತ್ರ ಸೌಲಭ್ಯವಿಲ್ಲ ಎಂದು ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಿ ಸಾವಿರಾರು ಹಣವನ್ನು ರೋಗಿಗಳಿಂದ ಲೂಟಿ ಮಾಡುತ್ತಿದ್ದಾರೆ. ಚಿನ್ನದ ತಾಳಿ ಗಿರವಿ ಇಟ್ಟು ಹೆರಿಗೆ ಮಾಡಿಸಿರುವ ಸಾಕಷ್ಟು ಉದಾಹರಣೆಗಳಿವೆ. ಹೆರಿಗೆ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದಿದ್ದರೆ, ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಕ್ಕಳ ಪರಿಸ್ಥಿತಿ ಏನಾಗಬೇಕು. ಇದು ಸರ್ಕಾರಿ ಆಸ್ಪತ್ರೆಯೋ? ಅಥವಾ ಖಾಸಗಿ ಆಸ್ಪತ್ರೆಯೋ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ.ಶಿವಪ್ರಸಾದ್ ಸಿಬ್ಬಂದಿಗಳ ಸಭೆ ನಡೆಸಿ ರೋಗಿಗಳಿಂದ ಹಣ ಪಡೆದ ಸಿಬ್ಬಂದಿಗಳನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಕೂಡಲೇ ಆಸ್ಪತ್ರೆಗೆ ಥೈರಾಯ್ಡ್ ಪರೀಕ್ಷಾ ಯಂತ್ರದ ಸೌಲಭ್ಯವನ್ನು ಓದಗಿಸಿ ರೋಗಿಗಳನ್ನು ರಕ್ಷಿಸಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.