ಬೆಂಗಳೂರು ನಗರ

ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥನಗರ ಮೇಲುಸೇತುವೆ ಬಗ್ಗೆ ಸ್ಪಷ್ಟಿಕರಣ

ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥನಗರ ಮೇಲುಸೇತುವೆಯ ಕಾಮಗಾರಿಯನ್ನು ಮೆ: ಎಂ. ವೆಂಕಟರಾವ್: ಇನ್‌ಫ್ರಾ ಪ್ರೊಜೆಟ್ಸ್ ಪ್ರೈ. ಲಿ., ರವರಿಗೆ ವಹಿನಸಲಾಗಿದ್ದು, ಸದರಿ ಕಾಮಗಾರಿಯು ದಿನಾಂಕ: 14.03.2016 ರಲ್ಲಿ ಪ್ರಾರಂಭಿಸಿ ದಿನಾಂಕ: 27.08.2018 ರಂದು ಕಾಮಗಾರಿಯನ್ನು ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಳಿಸಲಾಗಿರುತ್ತದೆ.

ಸದರಿ ಮೇಲುಸೇತುವೆಯಲ್ಲಿ ಆರ್.ಇ ಪ್ಯಾನೆಲ್‌ಗಳಲ್ಲಿ ಬಲ್ಜ್ಂಗ್ ಕಂಡುಬಂದಿದ್ದರಿಂದ, ಸದರಿ ಕಾಮಗಾರಿಯ ಯೋಜನಾ ಸಮಾಲೋಚಕರ ತಾಂತ್ರಿಕ ವರದಿ ಅನ್ವಯ ಬಲ್ಜಿಂಗ್ ಅನ್ನು ತಡೆಗಟ್ಟಲು 52 ಆರ್.ಇ ಪ್ಯಾನೆಲ್‌ಗಳಿಗೆ ನೈಲಿಂಗ್ ಅಳವಡಿಸಲಾಗಿರುತ್ತದೆ. ಈ ಮದ್ಯೆ ಮೇಲುಸೇತುವೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿದ್ದ ಹಿನ್ನೆಲೆಯಲ್ಲಿ ಸದರಿ ಕಾಮಗಾರಿಯ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ಕೋರಿಲಾಗಿದ್ದು, ಈ ಕುರಿತಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ತಪಾಸಣೆಯನ್ನು ಕೈಗೊಂಡು ಕೂಲಂಕುಷವಾಗಿ ಪರಿಶೀಲಸಿ ದಿನಾಂಕ: 15.02.2022 ರಲ್ಲಿ ವರದಿ ನೀಡಿರುತ್ತಾರೆ.

ಸದರಿ ವರದಿಯಲ್ಲಿ Verticality ಯಿಂದ ಕೆಲವು ಆರ್.ಇ ಪ್ಯಾನಲ್‌ಗಳು ಸ್ವಲ್ಪ ಬಲ್ಜ್ ಆಗಿರುತ್ತವೆ. ಈ ಬಲ್ಜ್ ಆಗಿರುವ ಪ್ಯಾನಲ್‌ಗಳು ಮತ್ತಷ್ಟು ಬಲ ಆಗುವ ಕುರಿತು ಪರಿಶೀಲಿಸುವ ಸಲುವಾಗಿ ಎಡಭಾಗದ ಆರ್.ಇ ಪ್ಯಾನೆಲ್‌ಗಳ ಪಕ್ಕದಲ್ಲಿ 10.00 ಮೀಟರ್‌ಗಳ ಅಂತರದಲ್ಲಿ 12 ಅಡಿಯ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದ್ದು, ಪ್ರತಿ ವಾರ ಬಲ್ಜಿಂಗ್‌ ಅನ್ನು ಅಳತೆ ಮಾಡುತ್ತಿದ್ದು, ಈ ದಿನದವರೆಗೂ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ.

ಆದ್ಯಾಗ್ಯೂ ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ನೀಡಿರುವ ವರದಿಯಿಂದ ಮತ್ತೊಂದು ಹೆಜ್ಜೆ ಮುಂದುವರೆದು ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಯವರಿಂದ ಮತ್ತೊಂದು ಅಭಿಪ್ರಾಯವನ್ನು ಪಡೆಯಲು ಪತ್ರ ಬರೆಯಲಾಗಿರುತ್ತದೆ. ಸದರಿ ರವರು ನೀಡುವ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಈಗಾಗಲೇ ಸದರಿ ಮೇಲುಸೇತುವೆಯನ್ನು ನುರಿತ ತಜ್ಞರಿಂದ ಮೂರು-ನಾಲ್ಕು ಬಾರಿ ತಪಾಸಣೆ ಕೈಗೊಂಡಿದ್ದು, ವಾಹನ ಸಂಚಾರಕ್ಕೆ ಯಾವುದೇ ತರಹದ ತೊಂದರೆಯಿರುವುದಿಲ್ಲ. ಹಾಗಾಗಿ ಸಾರ್ವಜನಿಕರು ವಾಹನಗಳಲ್ಲಿ ಮೇಲುಸೇತುವೆಯ ಮೇಲೆ ಸಂಚರಿಸಬುದಾಗಿರುತ್ತದೆ ಎಂದು ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ವಿನಾಯಕ ಸುಗೂರ್ ರವರು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸ್ಪಷ್ಟೀಕರಣ ಪ್ರತಿಯನ್ನು ಲಗತ್ತಿಸಿದೆ.

Related Articles

Leave a Reply

Your email address will not be published. Required fields are marked *

Back to top button