ಮೈಸೂರು

ನೆಲ ಬಾವಿಯಲ್ಲಿ ಅಪರೂಪದ ಚಿಪ್ಪು ಹಂದಿ ಪತ್ತೆ

ನಂಜನಗೂಡು ನಗರದ ರಾಘವೇಂದ್ರ ಸ್ವಾಮಿಗಳ ಮಠದ ಹಿಂಭಾಗದಲ್ಲಿರುವ ಕಶ್ಯಪ್ ಎಂಬುವವರ ಮನೆಯ ನೆಲ ಬಾವಿಯಲ್ಲಿದ್ದ ಅಪರೂಪದ ಜೀವ ಸಂಕುಲ ಚಿಪ್ಪು ಹಂದಿಯನ್ನು ಗೋಳೂರು ಸ್ನೇಕ್ ಬಸವರಾಜ್ ರಕ್ಷಣೆ ಮಾಡಿದ್ದಾರೆ. ನೆಲಬಾವಿಯಲ್ಲಿದ್ದ ಚಿಪ್ಪು ಹಂದಿಯನ್ನು ಕಂಡು ಮನೆಯ ನಿವಾಸಿಗಳು ಭಯಭೀತಿಯಲ್ಲಿದ್ದರು. ಕೂಡಲೇ ಗೋಳೂರು ಸ್ನೇಕ್ ಬಸವರಾಜ್ ಅವರೇ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದರು.


ಸ್ಥಳಕ್ಕೆ ಆಗಮಿಸಿದ ಗೋಳೂರು ಬಸವರಾಜ್ ನೆಲಬಾವಿಯಲ್ಲಿದ್ದ ಚಿಪ್ಪು ಹಂದಿಯನ್ನು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಹೊರತೆಗೆದು ರಕ್ಷಣೆ ಮಾಡಿ ಇದನ್ನು ಓಂಕಾರ್ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ ಎಂದು ತಿಳಿಸಿದರು.‌ ಚಿಪ್ಪು ಹಂದಿಯ ಗಾತ್ರ ಸುಮಾರು 30 ರಿಂದ 100 ಸೆ.ಮೀ ನವರೆಗೆ ಇದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಇದು ಸಾಮಾನ್ಯವಾಗಿ ಉಷ್ಣ ವಲಯದ ದೇಶಗಳಾದ ಆಫ್ರಿಕಾ ಮತ್ತು ಏಶ್ಯಾದಲ್ಲಿ ಇವೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ. ಮರದ ಪೊಟರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ. ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ. ಉದ್ದವಾದ ನಾಲಗೆ. ಒಂದು ಬಾರಿಗೆ 1 ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ. ಅರಣ್ಯನಾಶದಿಂದಾಗಿ ಇವು ಈಗ ನಾಶದ ಅಂಚಿನಲ್ಲಿವೆ. ದೇಹವು – ತಲೆ, ಕಾಂಡ ಮತ್ತು ಬಾಲ, ಪ್ರಬಲ, ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿಂದ ಒಳಗೊಂಡಿದೆ. ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ತಿತಗೊಂಡಿದೆ. ಮೂತಿ , ಮುಖದ ಪಾರ್ಶ್ವಗಳು ಹಾಗೂ ದೇಹದ ಒಳ ಭಾಗ ಕಂಡು ಬರುತ್ತದೆ.


ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ. ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ. ಕಣ್ಣು ಹಾಗು ಮೂಗು ಸಣ್ಣದಾಗಿದೆ. ನಾಲಗೆಯು ಗಮನಾರ್ಹವಾಗಿ ಉದ್ದ, ಜಿಗುಟಾಗಿದೆ. ಮಂಡಿಯು ಕೈ ಮತ್ತು ಕಾಲುಗಳನ್ನು ಒಳಗೊಂಡಿದೆ . ಕೈ ,ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮುಂದಿನ ಉಗುರುಗಳು ಬಿಲವನ್ನು ತೋಡಲು ಹಾಗು ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ. ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆಂಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ ಎನ್ನಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button