ವಿಶ್ವಕರ್ಮ ಸಮಾಜದಿಂದ ಶಾಸಕ ಅನಿಲ್ ಚಿಕ್ಕಮಾದುಗೆ ಅಭಿನಂದನಾ ಸಮಾರಂಭ
ಹೆಚ್.ಡಿ.ಕೋಟೆ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲ್ಲೂಕಿನ ವಿಶ್ವಕರ್ಮ ಸಮಾಜದ ಅದ್ಯಕ್ಷ ಕುಲುಮೆರಾಜುರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಮಾಜಕ್ಕಾಗಿ ಹಗಲಿರುಳು ಎನ್ನದೆ ದುಡಿದ ಶಾಸಕ ಅನಿಲ್ ಚಿಕ್ಕಮಾದುಗೆ ಅವರಿಗೆ ಸಮಾಜದಿಂದ ಅಭಿನಂದನೆ ಸಲ್ಲಿಸಲಾಯಿತು. ಸಮಾಜದ ನೂರಾರು ಮುಖಂಡರು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರ ಋಣಿ ನಾನು ಮಾಡಿದ ಅಭಿವೃದ್ಧಿ ಕಾರ್ಯವನ್ನು ನೆನೆಸಿಕೊಂಡು ಅಭಿನಂದನೆ ಸಲ್ಲಿಸುತ್ತಿರುವುದು. ವಿಶ್ವಕರ್ಮ ಸಮಾಜದ ಬದ್ಧತೆ ಎತ್ತಿ ತೋರುತ್ತದೆ. ಹಾಗಾಗಿ ನಿಮ್ಮ ಆಶೀರ್ವಾದ ನನ್ನ ಮೇಲಿದ್ದರೆ ನಿಮ್ಮಗಳ ಸೇವೆಯನ್ನು ನಾನು ಬದುಕಿರುವವರಗೆ ಮಾಡುತ್ತೇನೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಕುಲುಮೆ ರಾಜುರವರನ್ನು ಅಭಿನಂದಿಸಲಾಯಿತು. ಶಾಸಕ ಅನಿಲ್ ಚಿಕ್ಕಮಾದುವನ್ನು ಎಲ್ಲಾ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ನರಸೀಪುರ ರವಿ, ಹೆಚ್.ಸಿ.ನರಸಿಂಹಮೂರ್ತಿ, ಐಡಿಯ ವೆಂಕಟೇಶ, ನಾಗರಾಜು, ನಯಾಜ್, ಮೂರ್ತಿ ಆಚಾರ್, ನಾಗರಾಜು, ಸೌಮ್ಯ ಮಂಜುನಾಥ್ ಹಾಗೂ ವಿಶ್ವಕರ್ಮ ಸಮಾಜದ ನೂರಾರು ಗ್ರಾಮಸ್ಥರು ಮುಖಂಡರು ಹಾಜರಿದ್ದರು.
ಮಾಲಾರ ಮಹದೇವಸ್ವಾಮಿ, tv8 ಕನ್ನಡ, ಹೆಚ್.ಡಿ.ಕೋಟೆ