ಟಾಪ್-ನ್ಯೂಸ್
ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಂಧರ್ಭದಲ್ಲಿ ಮುಖ್ಯಪೇದೆ ಹೃದಯಾಘಾತದಿಂದ ಸಾವು
ಹೆಚ್ ಡಿ ಕೋಟೆ : ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಂಧರ್ಭದಲ್ಲಿ ಮುಖ್ಯಪೇದೆ ಹೃದಯಾಘಾತದಿಂದ ಸಾವು*ಕೆ ಆರ್ ನಗರ ತಾಲ್ಲೋಕಿನ ಸಿದ್ದಾಪುರ ಗ್ರಾಮದ ಪುಟ್ಟಸ್ವಾಮಪ್ಪ ಎಂಬುವವರ ಮಗ ಸುಮಾರು ನಲವತ್ತೇಳು ವರ್ಷದ ಅರವಿಂದ ಎಂಬುವವರು ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುವ ಸಂಧರ್ಭದಲ್ಲಿ ದಿನಾಂಕ ಮಾರ್ಚ್ ಎಂಟರಂದು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಅರವಿಂದರವರ ಬಳಗದ ಗೋಳು ಮುಗಿಲು ಮುಟ್ಟಿದೆಹುಣಸೂರು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ವ ಗ್ರಾಮ ಸಿದ್ದಪುರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತುಮೃತರಿಗೆ ಎರಡೂ ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ