ಮೈಸೂರು
ದ್ವಿತೀಯ ದರ್ಜೆ ಸಹಾಯಕ ನೇಣಿಗೆ ಶರಣು
ಹೆಚ್.ಡಿ.ಕೋಟೆ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಕರ್ನಾಟಕ ಭಾಗದ ಜಟಿಂಗ್ ಎಂಬ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತಿದ್ದರು.
ಅಂತರ್ಜಾತಿ ವಿವಾಹವಾಗಿದ್ದ ಇವರು ಗಂಡ ಹೆಂಡತಿ ಇಬ್ಬರೇ ಹೌಸಿಂಗ್ ಬೋರ್ಡ್ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳುಬಂದಿಲ್ಲ ಹೆಚ್ ಡಿ ಕೋಟೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಶವವನ್ನು ಮೈಸೂರಿನ ಶವಗಾರಕ್ಕೆ ಸಾಗಿಸಲಾಯಿತು.
ಮಾಲಾರ ಮಹದೇವಸ್ವಾಮಿ, tv8 ಕನ್ನಡ, ಹೆಚ್.ಡಿ.ಕೋಟೆ