ಮಹಿಳಾ ಹೋರಾಟಗಾರ್ತಿ ಎಂದು ಗುಂಪು ಕಟ್ಟಿಕೊಂಡು ಬಂದು ದಾಂಧಲೆ
ಹೆಚ್.ಡಿ.ಕೋಟೆ: ಹಾಲಿನ ಡೈರಿ ವಿಚಾರವಾಗಿ ಸುಮಾರು ಐದಾರು ವರ್ಷಗಳಿಂದ ಎರಡು ಗುಂಪಿನ ನಡುವೆ ವ್ಯಾಜ್ಯ ನಡೆಯಿತಿತ್ತು. ಇಂದು ಏಕಾಏಕಿ ಹಿರೇಹಳ್ಳಿ ಗ್ರಾಮಕ್ಕೆ ನುಗ್ಗಿದ ಮಹಿಳೆ ನಾನು ಮಹಿಳಾ ಹೋರಾಟಗಾರ್ತಿ ನೊಂದ ಮಹಿಳೆಗೆ ನ್ಯಾಯ ಕೊಡಿಸುತ್ತೇನೆ ಎಂದು ಕೆಲ ಪುಂಡಜನರ ತಂಡವನ್ನು ಕರೆದು ಕೊಂಡು ಹೋಗಿ ಹೆಬ್ಬಲಗುಪ್ಪೆ ಗ್ರಾಮದ ಜಯಲಕ್ಷ್ಮಿ ಎಂಬ ಮಹಿಳೆ ಹಿರೇಹಳ್ಳಿ ಗ್ರಾಮದಲ್ಲಿ ರಂಪಾಟ ನಡೆಸಿದ್ದಾರೆ.
ಸುಮಾರು ಮೂವತ್ತು ಲೀಟರ್ ಹಾಲನ್ನು ನೆಲಕ್ಕೆ ಚೆಲ್ಲಿ ಡೈರಿ ಬೀಗ ಒಡೆಯಲು ಮುಂದಾಗಿದ್ದಾರೆ. ಗ್ರಾಮಸ್ಥರು ಕಿಡಿಗೇಡಿಗಳಿದ್ದ ವಾಹನವನ್ನು ವಶಕ್ಕೆ ಪಡೆದು, ಮಹಿಳೆಯನ್ನು ತರಾಟೆಗೆ ತೆಗೆಂದುಕೊಂಡು ಪ್ರಕರಣವನ್ನು ದಾಖಲಿಸಲು ಮುಂದಾಗಿದ್ದಾರೆ. ವ್ಯಾಜ್ಯ ನಡೆಸುತ್ತಿದ್ದ ಹಾಲಿನ ಡೈರಿ ಕಾರ್ಯದರ್ಶಿ ಸುನಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇರೆ ಗ್ರಾಮದ ಮಹಿಳೆ ತಮ್ಮ ಊರಿಗೆ ಬಂದು ರಂಪಾಟ ಮಾಡಿದ್ದರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಮಲಾರ ಮಹದೇವಸ್ವಾಮಿ, tv8 ಕನ್ನಡ, ಹೆಚ್.ಡಿ.ಕೋಟೆ