ಟಾಪ್-ನ್ಯೂಸ್
KSRTC’ ಪ್ರಯಾಣಿಕರಿಗೆ ಬಿಗ್ ಶಾಕ್ : ಬಸ್ ಟಿಕೆಟ್ ಗೂ ‘GST’ ಹೇರಿಕೆ
ಈಗಾಗಲೇ ಸಾರಿಗೆ ಬಸ್ ನ ಟಿಕೆಟ್ ದರ ಸಾಕಷ್ಟು ದುಬಾರಿಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.
ಇದರ ನಡುವೆ ಬಸ್ ಟಿಕೆಟ್ ಗೂ ಜಿಎಸ್ ಟಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ ನಲ್ಲಿ ಮೈಸೂರಿನಿಂದ ಕುಶಾಲನಗರಕ್ಕೆ 114 ರೂ.ಟಿಕೆಟ್ ದರ ವಿಧಿಸಿದ್ದು, ಇದರ ಜೊತೆಗೆ 6 ಜಿಎಸ್ಟಿ (GST) ಕೂಡ ವಿಧಿಸಲಾಗಿದೆ.
ಒಟ್ಟು 120 ರೂ ಟಿಕೆಟ್ ನೀಡಲಾಗಿದೆ.
ಪ್ರಯಾಣಿಕರೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಸ್ ಟಿಕೆಟ್ ವೈರಲ್ ಆಗಿದೆ. ಈಗಾಗಲೇ ಸಾರಿಗೆ ಬಸ್ ನ ಟಿಕೆಟ್ ದರ ಸಾಕಷ್ಟು ದುಬಾರಿಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.ಇದರ ನಡುವೆ ಟಿಕೆಟ್ ಗೆ ಜಿಎಸ್ ಟಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.