ರಾಯಚೂರು

ರಾತ್ರಿ ಚಳಿಯನ್ನು ಲೆಕ್ಕಿಸದೆ ಪಂಚರತ್ನ ರಥಯಾತ್ರೆಗೆ ಭರ್ಜರಿ ಯಾಗಿ ಸ್ವಾಗತಿಸಿದ ಕಾರ್ಯಕರ್ತರು

ರಾಯಚೂರು: ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆಯ ರಥ ಯಾತ್ರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೇ ರಾಯಚೂರು ಜಿಲ್ಲೆಯಾದ್ಯಂತ ಮನ್ನಣೆ ದೊರೆತಿದ್ದು ಪಂಚರತ್ನ ಯಾತ್ರೆಯ 56ನೆ ದಿನವಾದ ಮಾನ್ವಿ ತಾಲೂಕಿನ ಸುಮಾರು 40ಕ್ಕೊ ಅಧಿಕ ಹಳ್ಳಿಗಳಲ್ಲಿ ಸಂಚರಿಸಿದ್ದು ಕೊನೆ ದಾಗಿ ಸಿರವಾರ ತಾಲೂಕಿನ ಕವಿತಾಳ ಪಟ್ಟಣಕ್ಕೆ ಸಂಜೆ ಆಗಮಿಸ ಬೇಕಾಗಿದ್ದ ಕುಮಾರಸ್ವಾಮಿ ರವರು ಸುಮಾರು ರಾತ್ರಿ 12 : ೦೦ ಗಂಟೆಗೆ ಆಗಮಿಸಿದ್ದು ಹೇಚ್. ಡಿ. ಕೆ ಹಾಗಿ ಚಳಿಯನ್ನು ಲೆಕ್ಕಿಸದೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಈರುಳ್ಳಿ ಹಾರ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು

ತದನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಸರ್ಕಾರವನ್ನು ರೂಪಿಸಿಕೊಡಿ ರಾಜ್ಯದ ಸೇವೆಯನ್ನು ಕಲ್ಪಿಸುವ ಅವಕಾಶ ಮಾಡಿಕೊಡಿ ಮಾನವಿ ವಿಧಾನಸಭಾ ಕ್ಷೇತ್ರದ ರಾಜ ವೆಂಕಟಪ್ಪ ನಾಯಕ ಅವರನ್ನು ಮತ್ತೊಮ್ಮೆ ಗೆಲ್ಲಿಸಿ. ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ನಂತರ ಮಾನ್ವಿ ವಿಧಾನಸಭಾ ಕ್ಷೇತ್ರದ ರಾಜ ವೆಂಕಟಪ್ಪ ನಾಯಕ್ ಮಾತನಾಡಿ ಜೆಡಿಎಸ್ ಪಕ್ಷಕ್ಕೆ ಜನಸಾಮಾನ್ಯರಿಗೆ ನೀಡಿದ ಜನಪರ ಯೋಜನೆಗಳು ಜನರು ಮೆಚ್ಚಿ ಬಡವರ ರೈತರ ಕಾಳಜಿ ಹೊಂದಿದ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡುತ್ತಾರೆ ಮುಂದಿನ ಮುಖ್ಯಮಂತ್ರಿ ಆಗಿ ಎಚ್ ಡಿ ಕುಮಾರಸ್ವಾಮಿ ಅವರು ಖಂಡಿತವಾಗಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಲು ಮತದಾರರ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ರಾಜ್ಯಕ್ಕೆ ಕುಮಾರಣ್ಣ ಗೆಲ್ಲಿಸಿ ಎಂದು ಮನೆ ಮಾಡಿದರು.

ಈ ಸಂದರ್ಭದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ಸಚಿವರು ವೆಂಕಟರಾವ್ ನಾಡಗೌಡ, ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ್, ಕವಿತಾಳ ಪ.ಪಂಚಾಯತಿ ಮಾಜಿ ಸದಸ್ಯ ಖಾಜಪಾಶಾ ಬ್ಯಾಗವಾಟ ಪಟ್ಟಣ ಪಂಚಾಯತಿಯ ಸದಸ್ಯರಾದ ಲಾಳೆಸಾಬ್ ನಾಯಕ್, ರುಕ್ಮುದ್ದೀನ್, ಮುಗ್ದು ಮ್ ಸಾಬ್ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button