ಆದ್ಯಾತ್ಮಬೆಂಗಳೂರು ನಗರ

ಅಂತರ್​ ರಾಜ್ಯ ಖೋಟಾ ನೋಟು ಚಲಾವಣೆ ಪ್ರಕರಣ; ಬಂಧಿತರ ಸಂಖ್ಯೆ 4ಕ್ಕೆ ಏರಿಕೆ.

ಅಂತರರಾಜ್ಯ ಖೋಟಾ ನೋಟು ಚಲಾಯಿಸ್ತಿದ್ದ ಆರೋಪಿಗಳ ಬಂಧನ ಪ್ರಕರಣದಲ್ಲಿ ಈಗ ಮತ್ತೊಂದು ಬೆಳವಣಿಗೆ ಆಗಿದ್ದು ಬಂಧಿತ ಅರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಇವರು 500 ಮುಖಬೆಲೆಯ 40 ಲಕ್ಷ ರೂ. ಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದರು.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್ ಮತ್ತು ರಜಪುತ್ರ ರಜನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಆಂಧ್ರಪ್ರದೇಶದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದರು.

ಇವರ ತಂಡ ಜನವರಿ 19 ರಂದು ಮಧ್ಯಾಹ್ನ 2:00 ಗಂಟೆ ಹಣ ಚಲಾವಣೆಗೆ ಅಣಿಯಾಗಿದ್ದರು. ಉತ್ತರಹಳ್ಳಿಯ ಪೂರ್ಣ ಪ್ರಜ್ಞ ಲೇಔಟ್​ನಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದರು.

ಜನವರಿ‌ 19 ರಂದು ಆರೋಪಿಗಳಿಬ್ಬರ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿತ್ತು. ಪೊಲೀಸರು, ಚರಣ್ ಸಿಂಗ್ ಮತ್ತು ರಜನಿ ಬಳಿ 40 ಲಕ್ಷ ನಕಲಿ ಖೋಟಾ ನೋಟು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದರು. ಮತ್ತಷ್ಟು ಆರೋಪಿಗಳ ಬಂಧನಕ್ಕೆ ಆಂದ್ರಪ್ರದೇಶದ ಕಡಪ ಜಿಲ್ಲೆಗೆ ತೆರಳಿ ಶೋಧ ಮಾಡಿದ ವೇಳೆ ಆಂಧ್ರದ ಕಡಪ ಜಿಲ್ಲೆಯಲ್ಲಿ ಮತ್ತಿಬ್ಬರು ಆರೋಪಿಗಳು ಇರುವ ಬಗಗೆ ಮಾಹಿತಿ ಪಡೆದ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button