ಕಳಪೆ ಕಾಮಗಾರಿ ಕಂಡು ಗುತ್ತಿಗೆದಾರನಿಗೆ ಮೇಲೆ ಶಾಸಕರ ದರ್ಪ
ರಾಯಚೂರು: ಕವಿತಾಳ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ವಿಭಜಕ ಕಾಮಗಾರಿ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕರು ಕಳಪೆ ಕಾಮಗಾರಿಯನ್ನು ಕಂಡು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಕಂಡು ಶಾಸಕ ರಾಜಾ ವೆಂಕಟಪ್ಪ ನಾಯಕ ಇಂಜಿನೀಯರ್ ಶ್ಯಾಮಲಪ್ಪರನ್ನು ತರಾಟೆಗೆ ತೆಗೆದುಕೊಂಡಿದರು.
ರಸ್ತೆ ವಿಭಜಕ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಿರ್ಮಾಣ ಹಂತದಲ್ಲಿಯೇ ಗೋಡೆ ಕುಸಿದು ಬಿದ್ದಿದೆ ಮತ್ತು ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಪಿಡಬ್ಲ್ಯೂಡಿ ಎಂಜಿನಿಯರ್ ಸ್ಯಾಮುಯೆಲ್ ಹಾಗೂ ಉಪ ಗುತ್ತಿಗೆದಾರನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಗುತ್ತಿಗೆದಾರ ಧರಿಸಿದ ಕನ್ನಡಕ ಮತ್ತು ಮೊಬೈಲನ್ನು ಬಿಸಾಡಿ ದರ್ಪ ಮೆರೆದಿದ್ದಾರೆ.
ಸಂತೆ ಬಜಾರ್ನಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ವಿಳಂಬವಾಗಿದ್ದರಿಂದ ಉಪ ಗುತ್ತಿಗೆದಾರ ಹೇಮಂತ್ ನಿಗೆ ನೀವು ನನ್ನ ಹೆಸರು ಹಾಳು ಮಾಡುವದಕ್ಕೆ ಕಾಮಗಾರಿ ತೆಗೆದುಕೊಂಡಿದ್ದಿರಿ ಎಂದು ನಿಂದಿಸಿದರು. ಇನ್ನು ಮಾನ್ವಿ ಶಾಸಕರ ಈ ನಡತೆಯನ್ನು ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದರು.
ಮೊಹಮದ್ ಶಫಿ, tv8 ಕನ್ನಡ, ಸಿರವಾರ