ಸಿದ್ದರಾಮಯ್ಯನವರೇ ಎಲ್ರಿ ನಿಮ್ಮ ಅರಚಾಟ, ಕಿರುಚಾಟ…?
ನಂಜನಗೂಡು: 50ವರ್ಷಗಳ ಕಾಲ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಇನ್ನು ಮುಂದೆ ಚುನಾವಣೆ ನಿಲ್ಲುವುದಿಲ್ಲ ಭಾಷಣ ಮಾಡುವುದಿಲ್ಲ. ಇದು ನನ್ನ ಕೊನೆ ಚುನಾವಣೆಯ ಭಾಷಣ ಎಂದು ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಟಿ ಜಯಕುಮಾರ್ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಿಸಿದ್ದೆ.
ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ 140 ಕೋಟಿ ಹಣವನ್ನು ಇನ್ನೂಳಿದ ತಾಲ್ಲೂಕಿನ ದೇವಾಲಯಕ್ಕೆ ನೀಡಲು ಹೇಳಿದ್ದೇವೆ.
ಯಾರೋ ಎಲೆಕ್ಷನ್ ಗೆ ದುಡ್ಡು ಹಂಚಿಬಿಟ್ಟರೆ. ಗೆದ್ದು ಏನ್ ಮಾಡಕ್ಕಾಗುತ್ತೆ ಕೇಳಿ ನೀವೇ. ಕಳಲೆ ಕೇಶವಮೂರ್ತಿ ಬಹಳ ದೊಡ್ಡ ಲೀಡರ್ . 36 ಸಾವಿರ ಲೀಡ್ ನಲ್ಲಿ ಸೋತ್ರಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಏನ್ ಸಿದ್ದರಾಮಯ್ಯ ಅವರ ಅರಚಾಟ ಕೂಗಾಟ.
ಬಿಜೆಪಿ ಲೋಕಸಭಾ ಕ್ಷೇತ್ರದಲ್ಲಿ 25 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಎಲ್ರಿ ನಿಮ್ಮ ಅರಚಾಟ, ಕಿರುಚಾಟ, ಜನರು ನೋಡ್ತಾರೆ. ಕಾಂಗ್ರೆಸ್ ನಲ್ಲಿ ಯಾರು ಮುಖ್ಯಮಂತ್ರಿ ಆಗ್ತಾರೆ ಕೇಳಿ ಆ ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ನಮ್ಮದು ಮದ್ದೂರು ಶಟ್ಲು ಸರ್ಕಾರವಲ್ಲ ಡಬಲ್ ಇಂಜಿನ್ ಸರ್ಕಾರ, ಎಂದು ವಾಗ್ದಾಳಿ.