ಕೊರಳಲ್ಲಿ ಹಾವು, ಹಿಡಿದು; ಚುನಾವಣೆ ಭವಿಷ್ಯ ನುಡಿದ ವ್ಯಕ್ತಿ
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಚುನಾವಣಾ ಪೂರ್ವ ಸಮೀಕ್ಷೆ ಮಾಡಿಸಿಕೊಂಡಿರುವ ರಾಜಕೀಯ ಪಕ್ಷಗಳು ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಸಹ ಲೆಕ್ಕ ಹಾಕುತ್ತಿವೆ.
ಇತ್ತ ಮಾಧ್ಯಮಗಳು ಸೇರಿದಂತೆ ಕೆಲ ಖಾಸಗಿ ಸಂಸ್ಥೆಗಳು ಕರ್ನಾಟಕ ರಾಜಕೀಯ ಮತ್ತು ಚುನಾವಣಾ ಪೂರ್ವ ಸಮೀಕ್ಷೆ ವರದಿಯನ್ನು ಹೊರ ಹಾಕಿದೆ. ಮತ್ತೊಂದೆಡೆ ದೊಡ್ಡ ದೊಡ್ಡ ಮಠಾಧೀಶರು ರಾಜಕೀಯದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ರಾಯಚೂರಿನಲ್ಲಿ ವ್ಯಕ್ತಿ ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ದೇವದುರ್ಗ ವಿಧಾನಸಭಾ ಕ್ಷೇತ್ರದ ಬಗ್ಗೆ ಭವಿಷ್ಯ ನುಡಿದಿದ್ದಾನೆ.
ವ್ಯಕ್ತಿ ಕೊರಳಲ್ಲಿ ಹಾವು ಸುತ್ತಿಕೊಂಡು ಭವಿಷ್ಯ ನುಡಿದ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಮುದ್ರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಹಾವು ಸುತ್ತಿಕೊಂಡ ವ್ಯಕ್ತಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೆಲವು ಸಾಧಿಸುತ್ತಾರೆ ಎಂದು ಹೇಳಿದ್ದಾನೆ.
ಹುಚ್ಚಾಟದ ವಿಡಿಯೋ ವೈರಲ್
ಹಾಲಿ ಶಾಸಕ ಕೆ.ಶಿವನಗೌಡ ವಿರುದ್ಧ ನೀವು ಗೆಲ್ಲಬೇಕು. ನಂತರ ಮಂತ್ರಿ ಆಗಬೇಕು ಅಂತಾನೂ ಹೇಳಿದ್ದಾನೆ. ಹಾವು ಮತ್ತು ಕೈಯಲ್ಲಿ 50 ರೂಪಾಯಿ ನೋಟು ಹಿಡಿದು ವ್ಯಕ್ತಿಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಆದರೆ ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಈ ಬಾರಿ ಜೆಡಿಎಸ್ನಿಂದ ಕಣಕ್ಕಿಳಿಯಲು ಕರೆಮ್ಮ ಮುಂದಾಗಿದ್ದಾರೆ.