ಆದ್ಯಾತ್ಮ

ವರ್ಷದ ಮೊದಲ ಚಂದ್ರ ಗ್ರಹಣ

ಖಗೋಳ ಲೋಕದಲ್ಲಿ ಮತ್ತೊಂದು ಕೌತುಕ ವಿಚಾರವೆಂದರೆ ಗ್ರಹಣ. ಪ್ರತಿ ವರ್ಷ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಚಂದ್ರ ಗ್ರಹಣ ಇದೇ ಮೇ ತಿಂಗಳಲ್ಲಿ ಸಂಭವಿಸಲಿದೆ. 2023ರ ವರ್ಷದ ಮೊದಲ ಚಂದ್ರ ಗ್ರಹಣವು ಮೇ 5, ಶುಕ್ರವಾರ ಸಂಭವಿಸುತ್ತದೆ ಮತ್ತು ಇದು ಭಚ್ಛಾಯ (ಪೆನಂಬ್ರಲ್) ಚಂದ್ರ ಗ್ರಹಣವಾಗಿರುತ್ತದೆ. ದೃಕ್ ಪಂಚಾಂಗದ ಪ್ರಕಾರ ಈ ಚಂದ್ರ ಗ್ರಹಣದ ಪೆನಂಬ್ರಲ್ ಪ್ರಮಾಣವು 0.95 ಆಗಿರುತ್ತದೆ. ಪೆನಂಬ್ರಲ್ ಚಂದ್ರ ಗ್ರಹಣದಲ್ಲಿ, ಭೂಮಿಯ ನೆರಳು ಚಂದ್ರನ ಹೊರ ಭಾಗದಲ್ಲಿ ಬೀಳುತ್ತದೆ. ಈ ಸಮಯದಲ್ಲಿ ಚಂದ್ರನ ಬೆಳಕು ಮಬ್ಬಾಗಿರುತ್ತದೆ. ಕೆಲ ಗ್ರಹಣಗಳನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಆದರೆ ಈ ಗ್ರಹಣವು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರಗ್ರಹಣ ಸಮಯ ‌ . ‌ ‌
2023ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023 ರಂದು ರಾತ್ರಿ 8:45 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯ ರಾತ್ರಿ 1:00 ಕ್ಕೆ ಕೊನೆಗೊಳ್ಳುತ್ತದೆ. ಸುಮಾರು 4 ಗಂಟೆ 15 ನಿಮಿಷ 34 ಸೆಕೆಂಡುಗಳು ಪೆನಂಬ್ರಲ್ ಗ್ರಹಣ ಇರುತ್ತದೆ.

ಈ ಚಂದ್ರಗ್ರಹಣವು ಬರಿಗಣ್ಣಿಗೆ ಗೋಚರಿಸದ ಹೊರತು, ಅದಕ್ಕೆ ಯಾವುದೇ ಮಹತ್ವವಿಲ್ಲ, ಯಾವುದೇ ಧಾರ್ಮಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ದೃಕ್ ಪಂಚಾಂಗ ವಿವರಿಸಿದೆ.

ಚಂದ್ರ ಗ್ರಹಣ 2023 : ಎಲ್ಲೆಲ್ಲಿ ಕಾಣುತ್ತದೆ ?

ದೃಕ್ ಪಂಚಾಂಗ್ ಪ್ರಕಾರ, ಚಂದ್ರ ಗ್ರಹಣವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಅಂಟಾರ್ಟಿಕಾದಿಂದ ಗೋಚರಿಸುತ್ತದೆ. ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಬಹುತೇಕ ಭಾಗಗಳಿಂದ ಯಾವುದೇ ಗ್ರಹಣ ಗೋಚರಿಸುವುದಿಲ್ಲ. ಏತನ್ಮಧ್ಯೆ, ಪೆನಂಬ್ರಾಲ್ ಗ್ರಹಣವು ಪಾಕಿಸ್ತಾನ, ನೇಪಾಳ, ಮಾರಿಷಸ್ ಮತ್ತು ಸಿಂಗಾಪುರದಲ್ಲಿ ಗೋಚರಿಸುತ್ತದೆ.

ಪ್ಯಾರಿಸ್, ರೋಮ್, ರಿಯಾದ್, ಕರಾಚಿ, ಬರ್ಲಿನ್, ಮಾಸ್ಕೋ, ಟೋಕಿಯೋ, ಸಿಡ್ನಿ, ಬೀಜಿಂಗ್, ಮ್ಯಾಡ್ರಿಡ್, ಕೈರೋ, ದುಬೈ, ಅಬುಧಾಬಿ, ಜೆಡ್ಡಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ.
‌ ‌‌

ಭಾರತದಲ್ಲಿ ಗ್ರಹಣ ಆಚರಣೆ

ನಂಬ್ರಾಲ್ ಚಂದ್ರ ಗ್ರಹಣವು ಭಾರತದ ಗೋಚರಿಸುವುದಿಲ್ಲವಾದ್ದರಿಂದ – ಗ್ರಹಣಾಚರಣೆಯಿಲ್ಲ ಹಾಗೂ ಸೂತಕ ಮಾನ್ಯ ಇಲ್ಲ. ‌ ‌ಈ ಕೇತುಗ್ರಸ್ತ ಚಂದ್ರಗ್ರಹಣವು ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಪ್ರಾರಂಭವಾಗಿ, ವಿಶಾಖ ನಕ್ಷತ್ರದಲ್ಲಿ ಮುಗಿಯುತ್ತದೆ. ‌ಭಾರತದಲ್ಲಿ ಈ ಗ್ರಹಣವು ಕಾಣಿಸದ ಕಾರಣ ಆಚರಣೆ ಇರುವುದಿಲ್ಲ. ಆದಾಗ್ಯೂ ಯಾರಿಗಾದರೂ ಆತಂಕ ಇದ್ದರೆ ಪರಿಹಾರವಾಗಿ ಜಪ (ಗಣಪತಿ, ಕಾಲಭೈರವ, ಚಂದ್ರ ಮತ್ತು ಕೇತು ಮಂತ್ರಗಳು) ಮಾಡಬಹುದು ಮತ್ತು ದಾನಗಳನ್ನು (ಶ್ವೇತ ವಸ್ತ್ರ ಜೊತೆಗೆ ಅಕ್ಕಿ ಹಾಗೂ ಚಿತ್ರ ವರ್ಣದ ಜೊತೆಗೆ ಹುರುಳಿಕಾಳು) ದಕ್ಷಿಣೆ ಸಮೇತವಾಗಿ ಸತ್ಪಾತ್ರರಿಗೆ ಮಾಡಬಹುದು.

Related Articles

Leave a Reply

Your email address will not be published. Required fields are marked *

Back to top button