ಆರೋಗ್ಯ
ಟಿ. ನಾಗರತ್ನ ಅವರಿಗೆ ಶುಭಕೋರಲಾಯಿತು. II RENUKACHARYA II JMS9 NEWS 24×7 II
Honnali : ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 20 ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಕೋವಿಡ್ ಸಮಯದಲ್ಲಿ ಕೊರೋನ ವಾರಿಯರ್ ಆಗಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಿರುವ ಸಹೋದರಿ ಶ್ರೀಮತಿ ಟಿ. ನಾಗರತ್ನ ಅವರ ಸೇವೆಯನ್ನು ಪರಿಗಣಿಸಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ‘ರಾಷ್ಟ್ರಪ್ರಶಸ್ತಿ ‘ ಗೌರವಕ್ಕೆ ಪಾತರಾಗಿದ್ದು, ಇದು ರಾಜ್ಯ, ಜಿಲ್ಲೆ ಹಾಗೂ ನಮ್ಮ ತಾಲ್ಲೂಕಿನ ಜನತೆ ಹೆಮ್ಮೆ ಪಡುವ ವಿಷಯವಾಗಿದ್ದು, ಸಹೋದರಿ ಶ್ರೀಮತಿ ಟಿ. ನಾಗರತ್ನ ಅವರಿಗೆ ಇಂದು ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ನಿವಾಸದಲ್ಲಿ ಅಭಿನಂದಿಸಿ ಶುಭಕೋರಲಾಯಿತು.