ಆದ್ಯಾತ್ಮಕೊಪ್ಪಳ

ಶ್ರೀ ಜಯತೀರ್ಥರನ್ನು ಕಾಪಾಡಲು ಹೋರಾಟ II GANGAVATHI II JMS9 NEWS 24×7 II

Gangavathi : *ನವಬೃಂದಾವನದ ಶ್ರೀ ಜಯತೀರ್ಥರ ಅಸ್ಮಿತಿಯನ್ನು ಕಾಪಾಡಲು ಹೋರಾಟ ಗಂಗಾವತಿ – ಕರ್ನಾಟಕ* ಈ ಹೋರಾಟದಲ್ಲಿ ಸಾವೇರರುಜನ ಶ್ರೀ ಮಠದ ಭಕ್ತರು ಶಿಷ್ಯರು ಪಾಲ್ಗೊಂಡು ಗಂಗಾವತಿ ತಹಸೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಶತಶತಮಾನಗಳಿಂದ ಪರಂಪರಾಗತವಾಗಿ , ತಂದೆ, ತಾತಂದಿರು – ಮುತ್ತಾತಂದಿರು ಹಾಗೂ ಅವರ ಪೂರ್ವೀಕರು ನಂಬಿಕೊಂಡು ಬಂದಿರುವ ಬಲವಾದ ನಂಬಿಕೆ ,ಭಾವನೆ ಶ್ರೀ ಜಯತೀರ್ಥಶ್ರೀಮಚ್ಚರಣರು ನಮ್ಮ ” ಸ್ವರೂಪೋದ್ವಾರಕ ಗುರುಗಳು ಗಂಗಾವತಿ ತಾಲೂಕಿನ ಆನೇಗುಂದಿಯ ನಡುಗಡ್ಡೆಯ ನವವೃಂದಾವನದಲ್ಲಿ ಬೃಂದಾಸನಸ್ಥರಾಗಿ ತಪೋನಿರತರಾಗಿದ್ದು ನಮ್ಮನ್ನು ಪೋಷಿಸುತ್ತಿರುವ ಗುರುವಂದ್ಯರು ಎಂಬುದು. ಪಂಡಿತ ಪಾಮರಿಂದ ವಂದ್ಯರಾದ ಇವರು ಸುಮಾರು 13-14ನೇ ಶತಮಾನದಿಂದ ವಿಜಯನಗರದ ರಾಜಸ್ಥಾನವನ್ನು ತಮ್ಮ ಕಾರ್ಯಚಟುವಟಿಕೆಯನ್ನಿಟ್ಟುಕೊಂಡಿದ್ದು .ಸ್ವತಃ ವೀರಸೇನಾನಿಗಳಾಗಿ ಕ್ಷತ್ರಿಯ ಧರ್ಮವನ್ನು ಪಾಲಿಸುತ್ತ, ವೈರಾಗ್ಯದನಿಧಿಯಾಗಿ ಸನ್ಯಾಸ ಸ್ವೀಕರಿಸಿ ಸನಾತನ ಧರ್ಮದ ಸಂರಕ್ಷಣಿಗೆ ಕಟಿಬದ್ಧರಾದ ವೀರಸನ್ಯಾಸಿ .ಶ್ರೀಜಯತೀರ್ಥರು ಇವರು ಕ್ಷಾತ್ರ ಮತ್ತು ಸನ್ಯಾಸ ಧರ್ಮಗಳ ಸಂಗಮ ಭಕ್ತಿ ವೇದಾಂತ, ವೀಥಿಯಲ್ಲಿ ಪ್ರಪಂಚವನ್ನೇ ಬೆರಗು ಗೊಳಸುವಂತಹ ಸತ್ಯತ್ವದ ಪ್ರತಿಪಾಸನೆಯನ್ನು ಮಾಡಿದ ಅಧ್ಯಾತ್ಮಿಕ ರಂಗದಲ್ಲಿ ನಿಷ್ಕಳಂಕವಾಗಿ ಮೂಡಿದ ಜಗದ್ಗುರು ಶ್ರೀಮಧ್ವಾಚಾರ್ಯರ ಪರಂಪರೆಯ ಅಗ್ರ ಶ್ರೇಣಿಯಲ್ಲಿ ನಿಲ್ಲುವ ಮಹಾವಿದ್ವಾಂಸರು ಟಿಕಾಕಾರರು – ಶ್ರೀ ಜಯತೀರ್ಥಶ್ರೀಮಚ್ಚರಣರು ಇವರು ” ಶ್ರೀಮನ್ನ್ಯಾಯಸುಧಾ ಎಂಬ ಮಹೋನ್ನತ ಕೃತಿಯನ್ನು ಅಧ್ಯಾತ್ಮ ಪ್ರಪಂಚಕ್ಕೆ ಧಾರೆ ಎರೆದ ಮಹೋನ್ನತರು ಶ್ರೀಜಯತೀರ್ಥರು – ( ಶ್ರೀ ಟೀಕಾಕೃತ್ಪಾದರು ) ಇಂತಹ ಮಹನೀಯರು ನಮ್ಮಲ್ಲಿ ಇರುವದು ನವವೃಂದಾವನ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿರುವದು ನಮ್ಮ ಎಲ್ಲರ ಹೆಮ್ಮೆ ಭಾಗ್ಯದ ಸಂಕೇತ – ಇವರು ನಮ್ಮ ಭಾಗದ ಅಸ್ಮಿತೆಯ ಸಂಕೇತ ಇಂತಹ ಮಹನೀಯಮಾನ್ಯರನ್ನು ಶ್ರೀನವವೃಂದಾವನ ಗಡ್ಡೆಯಲ್ಲಿ ಶ್ರೀಜಯತೀರ್ಥರ ಬೃಂದಾವನವನ್ನು ಪ್ರತ್ಯಕ್ಷ ಕಂಡ ಮತ್ತೊಬ್ಬ ಮಹನೀಯರಾದ, ಭಾವಿ ಸಮೀರರಾದ ಶ್ರೀವಾದಿರಾಜತೀರ್ಥರ “ತೀರ್ಥಪ್ರಬಂಧ ” , ಐತಿಹಾಸಿಕ ಆಧಾರವಲ್ಲದೇ ಮತ್ತೇನು ಅಲ್ಲದೇ ಅನೇಕ ಪೂಜ್ಯ ಯತಿವರ್ಯರುಗಳು ದಾಸವರೇಣ್ಯರು ಇತಿಹಾಸ ಸಂಶೋಧಕರು , ಲೇಖಕರು , ಚಿಂತಕರು ಸಮಾಜದ ಸರ್ವರು ಒಪ್ಪುವ, ನಂಬುವ, ಆರಾಧಿಸುವ ಶ್ರೀ ಜಯತೀರ್ಥರು ಗಜಗಹ್ವರ ನವವೃಂದಾವನದಲ್ಲಿ ಇರುವದು ಸತ್ಯ ! ಪೂರ್ಣಸತ್ಯ ! ಗಂಗಾವತಿ ತಾಲೂಕಿನ ನವೃಂದಾವನದಲ್ಲಿಯ ಒಂಬತ್ತು ಬೃಂದಾವನಗಳಲ್ಲಿರುವ ಶ್ರೀ ಜಯತೀರ್ಥರು ಆಚಾರ್ಯ ಮಧ್ವರ ಪರಂಪರೆಯ ಐದನೇ ಯತಿವರೇಣ್ಯರು ಇವರು ಕರ್ನಾಟಕದಲ್ಲಿ ನೆಲೆ ನಿಂತು ಶ್ರೀ ಆಂಜನೇಯ ಜನ್ಮಭೂಮಿಯಾದ ಕನ್ನಡದ ಗಂಡು ಮೆಟ್ಟಿದ ನಾಡಿನ ವಿಜಯನಗರ ಸಾಮ್ರಾಜ್ಯವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಇಲ್ಲಿಯೇ ಸನ್ನಿತರಾಗಿರುವವರು. ಇವರು ಮಧ್ವಸಿದ್ಧಾಂತಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು. ಇಂತಹ ಮಹಾನ್ ವ್ಯಕ್ತಿಯ ಉಪಸ್ಥಿತಿ ನವೃಂದಾವನ ನಡುಗಡ್ಡೆ ಕ್ಷೇತ್ರ ಎಂಬುದೇ ಕರ್ನಾಟಕ ಜನತೆಯ ಅದರಲ್ಲೂ ವಿಶೇಷವಾಗಿ ಕೊಪ್ಪಳ ರಾಯಚೂರು ವಿಜಯನಗರ ಹಾಗೂ ಬಳ್ಳಾರಿ ಜನತೆಗೆ ಹೆಮ್ಮೆನಂಬಿಕೆಯಾಗಿದೆ. ಇತ್ತೀಚಿನ ಕೆಲ ಕಿಡಿಗೇಡಿಗಳು ಶ್ರೀ ಜಯತೀರ್ಥರ ಮೂಲಬೃಂದಾವನ ಗುಲ್ಬರ್ಗ ಜಿಲ್ಲೆಯ ಮಳಖೇಡವೆಂತಲು ಅದಕ್ಕೆ ಬೇಕಾದಷ್ಟು ಪುರಾವೆಗಳಿವೆ .ಎಂತಲೂ ಗಂಗಾವತಿಯ ನವೃಂದಾವನ ಗಡ್ಡೆಯಲ್ಲಿರುವುದು ಶ್ರೀ ಜಯತೀರ್ಥರ ಮೂಲವೃಂದಾವನವಲ್ಲ ವೆಂತಲು ಅಪಪ್ರಚಾರ ನಡೆಸಿ ಭಕ್ತರುಗಳ ಶಿಷ್ಯರುಗಳನ್ನು ಗೊಂದಲಕ್ಕೆ ಕೆಡವುತ್ತಿದ್ದಾರೆ. ಈ ಕಿಡಿಗೇಡಿತನದ ಪ್ರಯತ್ನವಾಗಿ ದಿನಾಂಕ 26 6 2018 ರಂದು ಗುಲ್ಬರ್ಗದಲ್ಲಿ ನಡೆದಿರುವ ಪ್ರತಿಭಟನೆಯನ್ನು ಖಂಡಿಸಿ ನಾವು ಕೂಡಾ ಪ್ರತಿಭಟನೆಯ ಮೂಲಕ ಶ್ರೀಜಯತೀರ್ಥರ ಮೂಲವೃಂದಾವನ ಗಂಗಾವತಿಯ ನವೃಂದಾವನ ಗಡ್ಡೆಯಲ್ಲೇ ಹೊರತು ಮಳಖೇಡವಲ್ಲವೆಂತಲೂ ದೃಢಪಡಿಸುತ್ತೇವೆ. ಇಲ್ಲಿಗೆ ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರು, ಶ್ರೀರಾಘವೇಂದ್ರಗುರುಸಾರ್ವಭೌಮರು,ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭೇಟಿ ನೀಡಿದ ಹಾಗೂ ಪ್ರಾಚೀನ ಟೀಕಾಕಾರರಾದ ಶ್ರೀಪದ್ಮನಾಭತೀರ್ಥರ ಅಭಿಮುಖದಲ್ಲಿರುವ ಈ ಪವಿತ್ರ ಸ್ಥಳದಲ್ಲಿರುವುದು ಶ್ರೀ ಜಯತೀರ್ಥರ ಮೂಲಬೃಂದಾವನವೆಂಬುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.ಇದಕ್ಕೆ ವಿರುದ್ಧವಾಗಿ ಆ ಬೃಂದಾವನ ಶ್ರೀರಘುವರ್ಯರ ಬೃಂದಾವನವೆಂದು ಅಭಿಪ್ರಾಯಪಡುತ್ತಿರುವ ಕಿಡಿಗೇಡಿಗಳನ್ನು ನಾವು ಖಂಡಿಸಿ,ಶ್ರೀಜಯತೀರ್ಥರ ಮೂಲಬೃಂದಾವನದ ಸ್ಥಳವು ಗಂಗಾವತಿಯ ನವವೃಂದಾವನವೇ ಎಂಬುದನ್ನು ಒತ್ತಾಯಿಸುತ್ತೇವೆ. ಹಾಗೂ ಶ್ರೀ ಜಯತೀರ್ಥರ ಮೂಲವೃಂದಾವನ ನವೃಂದಾವನ ಬಿಟ್ಟು ಬೇರೆ ಕಡೆ ಇದೆ ಎಂದು ಇತಿಹಾಸ ತಿರುಚಿ ಜನರಲ್ಲಿ ಗೊಂದಲ ಎಬ್ಬಿಸುತ್ತಿರುವ ಕುತಂತ್ರಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ.

https://youtu.be/hzA-MomxX4o

Related Articles

Leave a Reply

Your email address will not be published. Required fields are marked *

Back to top button