ರಾಯಚೂರು
ರಾಯಚೂರು: ಮೊಸಳೆ ದಾಳಿಗೆ 9 ವರ್ಷದ ಬಾಲಕ ಬಲಿ!
ರಾಯಚೂರಿನಲ್ಲಿ ಘೋರ ದುರಂತ :
ನದಿಗೆ ಹೋಗಿದ್ದ ಬಾಲಕನನ್ನು ಹೊತ್ತೊಯ್ದ ಮೊಸಳೆ
ರಾಯಚೂರು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನೀರು ತರಲು ನದಿಗೆ ಹೋಗಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದ ಘಟನೆ ನಡೆದಿದೆ.
ರಾಯಚೂರು ತಾಲೂಕಿನ ಕುರುವಕಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ನವೀನ್ (9) ಮೃತ ಬಾಲಕ, ಪೋಷಕರ ಜೊತೆಗೆ ನದಿ ಬಳಿ ಇರುವ ಜಮೀನಿಗೆ ತೆರಳಿದ್ದ.
ಈ ವೇಳೆ ಪೋಷಕರು ನೀದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ನೀರು ತುಂಬಿಸಲು ಮುಂದಾದಾಗ ಮೊಸಳೆ ದಾಲಿ ಮಾಡಿ ನವೀನ್ ನನ್ನು ಹೊತ್ತೊಯ್ದಿದೆ.ಬಾಲಕ ನವೀನ್ ಗಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆಗೆ ಸ್ಥಳೀಯರಿಂದ ಕಾರ್ಯಾಚರಣೆ ನಡೆಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.