ಮಹಿಳೆಯರ ಮತದಾನ ಹೆಚ್ಚಿಸಲು ಸಜ್ಜಾದ ಸಖಿ ಮತಗಟ್ಟೆ
ಮೊಳಕಾಲ್ಮೂರು: ತಾಲೂಕಿನಲ್ಲಿ ಮತದಾನ ಹೆಚ್ಚಳಕ್ಕೆ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿನೂತನ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಮಹಿಳೆಯರ ಮತದಾನವನ್ನು ಹೆಚ್ಚಿಸಲು ಚುನಾವಣಾ ಆಯೋಗವು ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಇದರಡಿಯಲ್ಲಿ ಮಹಿಳೆಯ ಆದ್ಯತೆಯ ಸಖಿ ಮತಗಟ್ಟೆಗಳನ್ನು ಸ್ಥಾಪಿಸಿದೆ. ಈ ಕುರಿತು ಮಾಹಿತಿ ನೀಡಿದ ಮೊಳಕಾಲ್ಮೂರು ತಾಲೂಕಿನ ಸಹಾಯ ಸಹಾಯಕ ಚುನಾವಣಾ ಅಧಿಕಾರಿಗಳಾಗಿರುವ ತಹಸಿಲ್ದಾರ್ ಎಂ.ವಿ. ರೂಪ ಅವರು ಮೊಳಕಾಲ್ಮೂರು ತಾಲೂಕಿನಲ್ಲಿ ಕೊಂಡ್ಲಹಳ್ಳಿ ,ಕೋನಾಪುರ ,ರಾಂಪುರ ,ಮೊಳಕಾಲ್ಮೂರು ಪಟ್ಟಣದಲ್ಲಿ ಸಚಿ ಮತಗಟ್ಟೆ ಗಳನ್ನು ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕು ಸ್ವೀಟ್ ಸಮಿತಿ ಅಧ್ಯಕ್ಷರಾಗಿರುವ ತಾಲೂಕು ಪಂಚಾಯಿತಿ ಇಓ ಕೆ .ಓ. ಜಾನಕಿ ರಾಮ್ ಅವರು ಈ ಕುರಿತು ಮಾಹಿತಿ ನೀಡಿ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶೇಕಡ 60 ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ಮತಗಟ್ಟೆಗಳಲ್ಲಿ ಪಿಂಕ್ ಬಣ್ಣದ ಸಖಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮತಗಟ್ಟೆಗಳಲ್ಲಿ ಮತಗಟ್ಟೆಯ ಕೊಠಡಿ, ಮತ ಚಲಾವಣೆಯ ಟೇಬಲ್ ,ಕ್ಲಾತ್ ,ಬಲೂನ್ ಸೇರಿದಂತೆ ಎಲ್ಲವೂ ಪಿಂಕ್ ಮಯವನ್ನಾಗಿಸಲಾಗಿದೆ .
ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಒಬ್ಬ ಪೊಲೀಸ್ ಮಾತ್ರ ಪುರುಷ ಸಿಬ್ಬಂದಿ ಯೋಜನೆ ಮಾಡಲಾಗಿದೆ. ಸಿಬ್ಬಂದಿ ಸಹ ಪಿಂಕ್ ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ. ಈ ಸಖಿ ಮತಗಟ್ಟೆಗಳನ್ನು ಪಿಂಕ್ ಬಣ್ಣದಿಂದ ವಿಶೇಷ ರೀತಿಯಲ್ಲಿ ವರ್ಲಿ ಚಿತ್ರಕಲೆಯ ಮೂಲಕ ಮತದಾರರನ್ನು ಆಕರ್ಷಿಸುವಂತೆ ವಿಶೇಷ ಚಿತ್ರ ಬರಹ ಹಾಗೂ ಗೋಡೆ ಘೋಷಣೆಗಳ ಬರಹಗಳನ್ನು ಚಿತ್ರಿಸಲಾಗಿದೆ.
ಇದಲ್ಲದೆ ಮತದಾನದ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ತಾಲೂಕಿನಲ್ಲಿ ಗಿರಿಜನರ ಮತಗಟ್ಟೆ ,ಒಂದು ವಿಶೇಷ ಚೇತನರ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, ಒಂದು ಯುವ ಮತಗಟ್ಟೆ ಅಧಿಕಾರಿಗಳ ಮತಗಟ್ಟೆ, ಒಂದು ತಾಲೂಕಿನ ಐತಿಹಾಸಿಕ ಸಿದ್ದಾಪುರದ ಅಶೋಕನ ಶಿಲಾಶಾಸನದ ಮಾದರಿಯ ಆಕರ್ಷಣೀಯ ಮಾದರಿ ಮತಗಟ್ಟೆ ಗಳನ್ನು ಸ್ಥಾಪಿಸಿ ಮತದಾನ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ
ರಾಮಚಂದ್ರಪ್ಪ, , ಮೊಳಕಾಲ್ಮೂರು