ಮೈಸೂರು

ಮೋದಿ ಸಿನಿಮಾ ನಟನ ತರ ಬರ್ತಾ ಇದ್ದಾರೆ: BSP ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ವಾಗ್ದಾಳಿ

ನಂಜನಗೂಡು: ನಗರದ ಬಿಎಸ್ ಪಿ ಕಛೇರಿಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಹಾಗೂ ವರುಣ ಕ್ಷೇತ್ರದ ಅಭ್ಯರ್ಥಿ ಕೃಷ್ಣಮೂರ್ತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ಬರುತ್ತಿರುವುದು ಈ ದೇಶದ ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾಗಿತ್ತು‌. ಅದನ್ನೆಲ್ಲ ಮರೆತು ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕೆ ಒಬ್ಬ ಸಿನಿಮಾ ನಟನ ತರ ಭಾಗವಹಿಸುತ್ತಿದ್ದಾರೆ.


ಬಿಜೆಪಿಯವರು ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದರು. ಬಿಜೆಪಿ ಸರ್ಕಾರ ದೇಶವನ್ನು, ರಾಜ್ಯವನ್ನು ಉದ್ದಾರ ಮಾಡಿಬಿಟ್ಟಿದೆ ಎಂದಾದರೆ ಪ್ರಧಾನಿ ಯಾಕೆ ಬಂದು ಇಲ್ಲಿ ಮತಯಾಚನೆ ಮಾಡಬೇಕು. ಇಲ್ಲಿರುವ ಬಿಜೆಪಿ ನಾಯಕರಿಗೆ ಸಾಮರ್ಥ್ಯ ಇಲ್ವಾ? ಬಿಜೆಪಿಯ ಮಂತ್ರಿಗಳಿಗೆ, ಶಾಸಕರಿಗೆ ಮತಗಳನ್ನು ಸೆಳೆಯುವ ನೈತಿಕತೆ ಇಲ್ವಾ?, ಇದು ಬಿಜೆಪಿಯ ಸೋಲಿನ ಸಂಕೇತವಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ 60 ರಿಂದ 80% ಪರ್ಸೆಂಟ್ ಸರ್ಕಾರವಾಗಿದೆ. ನೂರಕ್ಕೂ ಹೆಚ್ಚು ಜನ ಜೈಲಿನಲ್ಲಿದ್ದಾರೆ.


ಧರ್ಮದ ಮೇಲೆ, ಜಾತಿಯ ಮೇಲೆ ಎತ್ತಿ ಕಟ್ಟಿ
ವೋಟ್ ತಗೋಬೇಕು ಎಂದಿರುವುದು ಇವರ ಆಟ ಬಯಲಾಗಿದೆ. ಸಂಪೂರ್ಣವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಲಿದೆ‌. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿ ಬೀದಿ ಬೀದಿಗಳಲ್ಲಿ ಉರುಳು ಸೇವೆ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಪ್ರಧಾನ ಮಂತ್ರಿಗಳು ಮತಯಾಚನೆ ಮಾಡಿರುವ ಉದಾಹರಣೆಗಳೇ ಇಲ್ಲ. ಇಷ್ಟು ಕೆಳಮಟ್ಟಕ್ಕೆ ಹೇಳಿದ್ದು ರಾಜಕಾರಣ ಮಾಡಿಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂದು ವಾಗ್ದಾಳಿ ನಡೆಸಿದರು.

ಸುಗಂಧರಾಜು, , ನಂಜನಗೂಡು

Related Articles

Leave a Reply

Your email address will not be published. Required fields are marked *

Back to top button