‘ಬಿಜೆಪಿಯ ಮಂಗಗಳಿಗೆ ಸಿದ್ದರಾಮಯ್ಯರಂತ ಮಾಣಿಕ್ಯ ಅರ್ಥ ಆಗಲ್ಲ’
ನಮಜನಗೂಡು: ಅಮಿತ್ ಶಾ ಅವರು ಸಿದ್ದರಾಮಯ್ಯರವರನ್ನು ಲಿಂಗಾಯಿತ ವಿರೋಧಿ ಎಂದು ಹೇಳಿದ್ದಾರೆ. ಇದೆಲ್ಲವನ್ನು ಬಿಜೆಪಿಯವರೇ ಮಾಡಿರುವ ಕುತಂತ್ರದ ಅಪಪ್ರಚಾರ ಎಂದು ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ರವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತಾಂಡವಪುರ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರವರು ಬಸವಣ್ಣನವರ ತತ್ವ ಮತ್ತು ಕನಕದಾಸರ ತತ್ವಗಳನ್ನು ಪ್ರತಿಪಾದನೆ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ , ಕನಕದಾಸ ಅವರ ಸಾಲಿಗೆ ನಮ್ಮ ಹೆಮ್ಮೆಯ ನಾಡಿನ ಸಿದ್ದರಾಮಯ್ಯರವರು ಸೇರುತ್ತಾರೆ.
ಸಿದ್ದರಾಮಯ್ಯ ಕನ್ನಡ ನಾಡಿನಲ್ಲಿ ಅಜರಾಮರಾಗಿ ಉಳಿಯುವ ಏಕೈಕ ನಾಯಕರಾಗಿದ್ದಾರೆ. ವರುಣ ಕ್ಷೇತ್ರದಲ್ಲಿ ಇವರ ಯಾವುದೇ ಕುತಂತ್ರ ನಡೆಯುವುದಿಲ್ಲ. ಬಹುಮತದಿಂದ ಸಿದ್ದರಾಮಯ್ಯ ಗೆದ್ದು, ಬರುತ್ತಾರೆ ಎದುರಾಳಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಹೆಸರಲ್ಲಿ ಬ್ಲೌಸ್ ತಿಂದ್ರು, ಮಾಸ್ಕ್ ತಿಂದ್ರು, ಆಕ್ಸಿಜನ್ ಕೊಡಲಿಲ್ಲ. 40% ಪ್ರಸೆಂಟ್ ತಿನ್ನೋದು ಬಿಟ್ಟು, ಏನು ಮಾಡಲಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ಗಾಳಿ ಇಲ್ಲ. ಯಾವುದೇ ಕಾರಣಕ್ಕೂ ಅದು ಬರೋದಿಲ್ಲ.
ಬಿಜೆಪಿಯ ವಾತಾವರಣ ಲಿಂಗಾಯಿತ ವಿರೋಧಿಯಾಗಿದೆ ಇದನ್ನು ಲಿಂಗಾಯಿತರು ಗಮನಿಸಬೇಕು. ಯಡಿಯೂರಪ್ಪ ಅವರಿಗೆ ಅಧಿಕಾರ ಇಲ್ಲದೆ ಇರುವ ಹಾಗೆ ಮಾಡಿದರು. ಪ್ರತಿಭಾನ್ವಿತ ನಾಯಕರಿಗೆ ಟಿಕೆಟ್ ಕೊಡದೆ ದ್ರೋಹ ಮಾಡಿದರು. ಹಾಗಾಗಿ ಇದು ಸಂಪೂರ್ಣವಾಗಿ ಲಿಂಗಾಯತ ವಿರೋಧಿ ಬಿಜೆಪಿ ಪಕ್ಷವಾಗಿದೆ. ಲಿಂಗಾಯಿತ ಸಮುದಾಯ ಮತ್ತು ಒಕ್ಕಲಿಗ ಸಮುದಾಯ, ಕುರುಬ ಸಮುದಾಯಗಳನ್ನು ತುಳಿಯುತ್ತಾ ಬಂದಿದ್ದಾರೆ.
ಬಿಜೆಪಿ ಸವರ್ಣಿಯರ ಪಕ್ಷವಾಗಿ ಹೊರ ಹೊಮ್ಮುತ್ತಿದೆ ಸವರ್ಣಿಯರ ಗುಲಾಮಗಿರಿ ಇಲ್ಲಿ ನಡೆಯೋದಿಲ್ಲ. ಬಿಜೆಪಿಯನ್ನು ಬುಡ ಸಮೇತ ಕಿತ್ತು ಎಸೆಯುತ್ತೇವೆ. ಕರ್ನಾಟಕದ ರೈತರು ಇದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ತಾಲ್ಲೂಕು ಅಧ್ಯಕ್ಷ ಮೋಹನ್ ರಾಯಣ್ಣ, ಮೈಸೂರು ತಾಲ್ಲೂಕು ಅಧ್ಯಕ್ಷ ಕಡಕೋಳ ರಘು ಹಾಜರಿದ್ದರು.