ಡಾ.ಜಿ.ಪರಮೇಶ್ವರ್ ರವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ
ನಂಜನಗೂಡು: ಡಾ.ಜಿ.ಪರಮೇಶ್ವರ್ ರವರ ಮೇಲೆ ಕಲ್ಲುತೂರಾಟ ಮಾಡಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವಕೀಲ ಕಾಂತರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು,
ಪರಮೇಶ್ವರ್ ಅವರನ್ನು ಸೋಲಿಸಲು ಈ ರೀತಿ ಹಲ್ಲೆ ನಡೆಸುತ್ತಿದ್ದಾರೆ.
ಹೂವಿನ ಒಳಗಡೆ ಕಲ್ಲುಗಳನ್ನು ಹಾಕಿ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಾರೆ ಎಂದರೆ ಇದು ಪ್ರಜಾಪ್ರಭುತ್ವ ವಿರೋಧದ ನೀತಿಯಾಗಿದೆ. ಪೊಲೀಸ್ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗ ಪರಿಶೀಲನೆ ಮಾಡುತ್ತಿಲ್ಲವೇ? ಚುನಾವಣಾ ಆಯೋಗ ಮತ್ತು ಪೊಲೀಸ್ ವ್ಯವಸ್ಥೆ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಪ್ರಚಾರ ನಡೆಸುವ ಅಭ್ಯರ್ಥಿಗೆ ರಕ್ಷಣೆ ಮಾಡೋದಿಕ್ಕೆ ಆಗೋದಿಲ್ಲ ಅಂದರೆ ನಾವು ಯಾವ ದೇಶದಲ್ಲಿದ್ದೇವೆ. ನಿಮ್ಮ ಕುತಂತ್ರದಿಂದ ಹಿಮ್ಮೆಟ್ಟಿಸುವ ಕೆಲಸ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಯಾವಾಗಲೂ ಪರಮೇಶ್ವರ್ ಅವರ ಜೊತೆ ವಕೀಲರು ನಾವು ಇದ್ದೇವೆ. ಕಲ್ಲು ತೂರಾಟ ನಡೆಸಿದ ಕಿಟಗೇಡಿಗಳನ್ನು ಬಂಧಿಸದೇ ಇದ್ದಲ್ಲಿ ನಾವೇ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.