ಕೊಂಯ್ಕ್ ಅಂದ್ರೆ ಎನ್ಕೌಂಟರ್, ಭಾರತದ ವಿರುದ್ಧ ಮಾತಾಡಿದ್ರೆ ಢಂ ಡಂ. ರೋಡ್ ಮೇಲೆಯೇ ಡಿಷ್ಕ್ಯಾಂ; ಖಡಕ್ ಸೂಚನೆ ನೀಡಿದ ಯತ್ನಾಳ್
ಕೊಂಯ್ಕ್ ಅಂದ್ರೆ ಎನ್ಕೌಂಟರ್… ಹಿಂದುಗಳ ಬಗ್ಗೆ ಮತ್ತು ಭಾರತದ ವಿರುದ್ಧ ಮಾತಾಡಿದ್ರೆ ಢಂ ಢಂ… ರೋಡ್ ಮೇಲೆಯೇ ಡಿಷ್ಕ್ಯಾಂ… ಮುಂದೆ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಪ್ರಚಾರಸಭೆಯಲ್ಲಿ ಬಹಿರಂಗವಾಗಿ ಯತ್ನಾಳ್ ಮಾತನಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಕಾನೂನು ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.
ಹಾರಾಡಿದರೆ ಎನ್ಕೌಂಟರ್ ಖಚಿತ
ಯತ್ನಾಳ್ ಮಾತನಾಡುತ್ತಾ, ಉತ್ತರ ಪ್ರದೇಶದಲ್ಲಿ ಇಬ್ಬರು ಅಣ್ಣ-ತಮ್ಮಂದಿರನ್ನು ಎನ್ಕೌಂಟರ್ ಮಾಡಲಾಯಿತು. ಹೀಗಾಗಿ ಕೆಲವರು ಜೈಲಿನಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಯುಪಿಯಲ್ಲಿ ವಾಹನಗಳು ಪಲ್ಟಿಯಗುತ್ತಲೇ ಇರುತ್ತವೆ. ರೌಡಿಗಳ ಹರಣವಾಗುತ್ತಲೇ ಇರುತ್ತದೆ. ಇನ್ನು ಮುಂದೆ ಕರ್ನಾಟಕದಲ್ಲಿ ಯಾರಾದರೂ ಹಾರಾಡಿದರೆ ಎನ್ಕೌಂಟರ್ ಖಚಿತ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಹರಾಂ ಕೋರ್
ಟಿಪ್ಪು ಸುಲ್ತಾನ್ ಹರಾಂ ಕೋರ್ ಎಂದ ಯತ್ನಾಳ್, ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅವನ ಫೋಟೋ ತೆಗೆದು ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಹಾಕುತ್ತೇವೆ ಎಂದರು.
ಊರ ಬದ್ಮಾಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ!
ಪ್ರಿಯಾಂಕ್ ಖರ್ಗೆ ಮಾತನಾಡುತ್ತಾ, ಮೋದಿ ನಾಲಾಯಕ್ ಎಂದು ಹೇಳಿರುವ ಬಗ್ಗೆ ಕಿಡಿಕಾರಿದ ಯತ್ನಾಳ್, ಊರ ಬದ್ಮಾಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮೂರು ಬಿಟ್ಟವರು ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿದ್ದಾರೆ. ನರೇಂದ್ರ ಮೋದಿ 150 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತಾಡುತ್ತೀರಾ ಎಂದಾದರೆ ಯೋಚನೆ ಮಾಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.