ಬಿಜೆಪಿ ಗೆಲ್ಲಿಸುಲು ಕಾಂಗ್ರೆಸ್ ಅಭ್ಯರ್ಥಿಗೆ ಹಾಕಿದ್ದಾರೆ – ಮುಜೀಬುದ್ದೀನ್
ರಾಯಚೂರು: ಏ:25: ರಾಯಚೂರು ನಗರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ಸಾಮಾರ್ಥವಿಲ್ಲ. ಕಾಂಗ್ರೆಸ್ ಕೆಲ ನಾಯಕರು ಬಿಜೆಪಿಯ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಕಾರಣಕ್ಕಾಗಿ ನಾನು ಕಣದಲ್ಲಿದ್ದೇನೆ ಎಂದು ಕಾಂಗ್ರೆಸ್ ಬಂಡಾಯದ ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ,
ನನಗೆ ಜನರು ನೀಡುವ ಸಹಕಾರ ಕಂಡು ಕಾಂಗ್ರೆಸ್ ಗೆ ಭಯ ಉಂಟಾಗಿದೆ ಹಲವು ಕಾಂಗ್ರೆಸ್ ಮುಖಂಡರು ಕಣದಿಂದ ಹಿಂದೆ ಸರಿಯಲು ಮನೆ ಬಾಗಿಲು ಬಡೆದರು ಒಪ್ಪಿಲ್ಲ ಜನರೇ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದು ನಾ ಹಿಂತೆಗೆಯುವ ಮಾತಿಲ್ಲ ಎಂದು ಹೇಳಿದರು.
ರಾಯಚೂರು ನಗರ ಕ್ಷೇತ್ರದ 11 ಹಳ್ಳಿಗಳಲ್ಲಿ 17ವಾರ್ಡ್ ಗಳಲ್ಲಿ ವಾಕ್ ಟು ವಾರ್ಡ್ ಕಾರ್ಯಕ್ರಮ ಮಾಡಿದ್ದೇನೆ. ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇನೆ. ನನಗೆ ಜನಬೆಂಬಲವಿದೆ. ಜನರನ್ನು ಕರೆದುಕೊಂಡು ಹೋಗಿ ಮತ ಕೇಳುತ್ತೇನೆ. ಜನರೇ ನಿರ್ಧಾರ ಮಾಡುತ್ತಾರೆ. ಯಾರೂ ಪ್ರಚಾರಕರು ಬೇಡ ಜನರೇ ನನಗೆ ಪ್ರಚಾರಕರು, ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸ ಕಾರ್ಯಗಳಿಗೆ ಜನ ಬೆಂಬಲ ಸೂಚಿಸಿತ್ತಾರೆ, ಪ್ರತಿ ಮನೆ ಮನೆಗೆ ಹೋಗಿ ಮತ ಕೇಳುತ್ತೇನೆ 10 ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವನಾಥ್ ಸಾಹುಕಾರ್ ರಾಯಚೂರು