ಮೈಸೂರು

ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ

ಹೆಚ್ ಡಿ ಕೋಟೆ: ಪಟ್ಟಣದ ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಕಾರ್ಯಕ್ರಮವನ್ನು ತಾಲ್ಲೋಕು ಅಡಳಿತದ ವತಿಯಿಂದ ಬಹಳ ಸರಳವಾಗಿ ಆಯೋಜಿಸಿದರು.


ಕಾರ್ಯಕ್ರಮವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಧಿಕಾರಿಗಳು ಹಾಗೂ ಮುಖಂಡರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೀಮನಹಳ್ಳಿ ಬಸವರಾಜು ಬಸವಣ್ಣನವರು ಸಮಾನತೆಯ ಹರಿಕಾರ ಈ ದೇಶದಲ್ಲಿ ಜಾತಿಯತೆ ಎಂಬ ಪಿಡುಗನ್ನು ತೊಡೆದು ಹಾಕಬೇಕೆಂದು ಹನ್ನೇರಡನೆಯ ಶತಮಾನದಲ್ಲಿ ಹೋರಾಟ ಮಾಡಿದ ಮಹಾನ್ ಶರಣರು
ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಧೇಯವಾಕ್ಯವನ್ನು ಹರಿತು ನಾವೆಲ್ಲಾ ಒಂದೇ ಎಂದು ಜೀವನ ಸಾಗಿಸಿ ಆದರ್ಶ ಮೆರೆಯ ಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ತಹಶೀಲ್ದಾರ್ ಮಹೇಶ್ ಮಾತನಾಡಿ ಬಸವಣ್ಣ ಅನುಭವ ಮಂಟಪವನ್ನು ಸ್ಥಾಪಿಸಿ ವಚನಗಳ ಮೂಲಕ ಸಮಾನತೆಗಾಗಿ ಹೋರಾಟ ಮಾಡಿ ಆ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಶರಣರಿಗು ಆಶ್ರಯವನ್ನು ನೀಡಿ ಸಮಾನತೆಯನ್ನು ಸಾರಿದ ಕ್ರಾಂತಿ ಪುರುಷ ಬಸವಣ್ಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್, ಗ್ರೇಡ್ ೨ ತಹಶೀಲ್ದಾರ್ ಸಣ್ಣರಾಮಪ್ಪ,ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಮುಖಂಡರಾದ ಮೊತ್ತ ಬಸವರಾಜು, ಜೆ ಪಿ ಚಂದ್ರಶೇಖರ, ರುದ್ರಪ್ಪ, ಸಿದ್ದಾಪುರ ಚಂದ್ರು, ನಾಗಣ್ಣ, ಮಹದೇವಪ್ಪ,ನಾಗರಾಜಪ್ಪ,ಚಿನ್ನಮ್ಮ,ದೇವಮಣಿ,ಶಿವರಾಜು,ಸಿದ್ದರಾಮಪ್ಪ,ಶಿವಸ್ವಾಮಿ,ಗುರುಸ್ವಾಮಿ,ಶಿವರಾಜಪ್ಪ,ಶೇಖರಪ್ಪ,ರಾಜಣ್ಣ,ಮಹೇಶ್, ನಾಗಣ್ಣ,ವೃಷಬೇಂದ್ರ,ಮಲ್ಲು,ತಾಲ್ಲೊಕು ಆಡಳಿತದ ಸಿಬ್ಬಂದಿ ಹಾಜರಿದ್ದರು


ಮಲಾರ ಮಹದೇವಸ್ವಾಮಿ

Related Articles

Leave a Reply

Your email address will not be published. Required fields are marked *

Back to top button