ಬೆಂಗಳೂರು ಗ್ರಾಮಾಂತರ

ಜೆ.ಪಿ.ನಡ್ಡಾ ಅವರ ರೋಡ್ ಷೋಗೆ ಜನಸಾಗರ


ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಶಿಡ್ಲಘಟ್ಟ ಮತ್ತು ಹೊಸಕೋಟೆಗಳಲ್ಲಿ ರೋಡ್ ಷೋಗಳಲ್ಲಿ ಪಾಲ್ಗೊಂಡರು.


ಶಿಡ್ಲಘಟ್ಟ ರೋಡ್ ಷೋದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್, ಸಂಸದ ಮುನಿಸ್ವಾಮಿ, ಸಚಿವ ಡಾ. ಸುಧಾಕರ್, ಅಭ್ಯರ್ಥಿ ರಾಮಚಂದ್ರಗೌಡ ಅವರಲ್ಲದೆ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಜೆ.ಪಿ.ನಡ್ಡಾ ಅವರು ಮಾತನಾಡಿ, ರಾಮಚಂದ್ರ ಗೌಡ ಅವರನ್ನು ಆಯ್ಕೆ ಮಾಡಲು ಮನವಿ ಮಾಡಿದರಲ್ಲದೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಜೆ.ಪಿ.ನಡ್ಡಾ ಅವರು ಸಂಜೆ ಹೊಸಕೋಟೆಯಲ್ಲಿ ರೋಡ್ ಷೋದಲ್ಲಿ ಭಾಗವಹಿಸಿದ್ದರು. ಅಲ್ಲಿಯೂ ಜನರು ಮತ್ತು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್, ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಅವರು ಪಾಲ್ಗೊಂಡಿದ್ದರು.


ಅರುಣ್ ಸಿಂಗ್ ಅವರು ಮಾತನಾಡಿ, ಎರಡೂ ರೋಡ್ ಷೋಗಳಲ್ಲಿ ಸೇರಿದ ಜನಸಾಗರವನ್ನು ಗಮನಿಸಿದರೆ ಎರಡೂ ಕಡೆ ಬಿಜೆಪಿ ಗೆಲ್ಲುವುದು ಖಚಿತ. ಕಾರ್ಯಕರ್ತರ ಉತ್ಸಾಹ, ಜನರ ವಿಶ್ವಾಸ ಮಾತ್ರವಲ್ಲದೆ ರಾಜ್ಯದಾದ್ಯಂತ ಬಿಜೆಪಿ ಅಲೆ ಇದೆ. ಇದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಹಾಯಕ ಎಂದು ನುಡಿದರು.

Related Articles

Leave a Reply

Your email address will not be published. Required fields are marked *

Back to top button