ತಂತ್ರಜ್ಞಾನ

ನಾಳೆಯಿಂದ 2 ದಿನ ಹೊತ್ತಿ ಉರಿಯುತ್ತೆ ಭೂಮಿ- ಮನೆಯಿಂದ ಹೊರಗೆ ಬರಲೇಬೇಡಿ ಎಂದ ನಾಸಾ ವಿಜ್ಞಾನಿಗಳು

ಇನ್ನೆರಡು ದಿನಗಳಲ್ಲಿ ಇನ್ನಷ್ಟು ಪ್ರಖರಗೊಳ್ಳಲಿದ್ದು ಹೆಚ್ಚು ಬಿಸಿಲಿನ ತಾಪಮಾನ ಅಂತೆಯೇ ಬಿಸಿಗಾಳಿಯನ್ನು (Heat Wind) ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಎಚ್ಚರಿಸಿದೆ. ಸೂರ್ಯನು 11 ವರ್ಷಗಳ ಆವರ್ತನೆಯ ಉತ್ತುಂಗ ಮಟ್ಟವನ್ನು ತಲುಪುವ ಸಮಯದಲ್ಲಿ ಇನ್ನಷ್ಟು ಪ್ರಖರಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಸೌರ ಬಿರುಗಾಳಿಯ ಆರಂಭದ ಹೊಡೆತವು ಏಪ್ರಿಲ್ 24 ರಂದು ಭೂಮಿಯನ್ನು ಅಪ್ಪಳಿಸಲಿದ್ದು ಏಪ್ರಿಲ್ 25 ರಂದು ಇನ್ನಷ್ಟು ಪ್ರಖರ ಬಿರುಗಾಳಿ ಭೂಮಿಯನ್ನು ಸೋಕಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ಸೂಚಿಸಿದೆ.ಈ ಸಮಯದಲ್ಲಿ ಆದಷ್ಟು ಪ್ರಖರವಾದ ಬಿಸಿಲಿಗೆ ಜನರು ಹೊರಗೆ ಓಡಾಡದಂತೆ ಸಂಸ್ಥೆ ತಿಳಿಸಿದ್ದು, ಸಾಕಷ್ಟು ನೀರು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವಂತೆ ತಿಳಿಸಿದೆ.

ಬಿರುಗಾಳಿಯ ತೊಂದರೆಗಳೇನು?ಸೂರ್ಯನು ಬಿಡುಗಡೆ ಮಾಡುವ ಬಿಸಿಗಾಳಿ ಅತ್ಯಂತ ಪ್ರಖರವಾಗಿರುತ್ತದೆ ಅಂತೆಯೇ ಮನುಕುಲಕ್ಕೆ ಅಪಾಯಕಾರಿಯೂ ಹೌದು. ಇದರಿಂದ ಬಿಡುಗಡೆಯಾಗುವ ವಿಕಿರಣವು ರೇಡಿಯೋ ಸಂವಹನಗಳಿಗೆ ಅಡ್ಡಿಯಾಗಬಹುದು ಎಂದು ನಾಸಾ ತಿಳಿಸಿದೆ.ಸೌರ ಬಿರುಗಾಳಿ ಹೇಗೆ ಉಂಟಾಗುತ್ತದೆ?ದೊಡ್ಡ ಪ್ರಮಾಣದ ಕಾಂತೀಯ ಸ್ಫೋಟವು ಸಂಭವಿಸಿದಾಗ ಆಗಾಗ್ಗೆ ಕರೋನಲ್ ಮಾಸ್ ಎಜೆಕ್ಷನ್ ಸೌರ ಜ್ವಾಲೆಯನ್ನು ಉಂಟುಮಾಡುತ್ತದೆ ಹಾಗೂ ಇದು ಸೌರ ವಾತಾವರಣದಲ್ಲಿ ಚಾರ್ಜ್ಡ್ ಕಣಗಳನ್ನು ಹೆಚ್ಚು ವೇಗಗೊಳಿಸುತ್ತದೆ.

ಈ ಸಮಯದಲ್ಲಿ ಸೌರ ಬಿರುಗಾಳಿ ಉಂಟಾಗುತ್ತದೆ. ಬಿರುಗಾಳಿಯು ಅಂತರ್ಜಾಲದಿಂದ ಶಕ್ತಿಯವರೆಗೆ ಪ್ರತಿಯೊಂದು ಎಲೆಕ್ಟ್ರಾನಿಕ್ ಮತ್ತು ಸಂವಹನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಉಪಗ್ರಹಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ.ನಾಸಾ ಎಚ್ಚರಿಕೆಯ ಕರೆಘಂಟೆನಾವು 2025 ರಲ್ಲಿ ಸೌರ ಗರಿಷ್ಠವನ್ನು ಸಮೀಪಿಸುತ್ತಿರುವಾಗ ಸೌರ ಘಟನೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಇದು ಭೂಮಿಯ ಮೇಲಿನ ನಮ್ಮ ಜೀವನ ಮತ್ತು ತಂತ್ರಜ್ಞಾನ, ಹಾಗೆಯೇ ಬಾಹ್ಯಾಕಾಶದಲ್ಲಿ ಉಪಗ್ರಹಗಳು ಮತ್ತು ಗಗನಯಾತ್ರಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನಾಸಾ ಇತ್ತೀಚಿನ ತನ್ನ ಬ್ಲಾಗ್‌ನಲ್ಲಿ ಎಚ್ಚರಿಕೆ ನೀಡಿದೆ.

ವಿಡಿಯೋ ಬಿಡುಗಡೆ ಮಾಡಿರುವ ನಾಸಾಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಸೂರ್ಯನು ಡಿಸೆಂಬರ್ 2019 ರಲ್ಲಿ ಪ್ರಾರಂಭವಾದ ಸೌರ ಚಕ್ರ 25 ರ ಮೂಲಕ ಸಂಚರಿಸುತ್ತಿದ್ದು, ಈ ಅವಧಿಯಲ್ಲಿ ಸೌರ ಚಕ್ರದಲ್ಲಿನ ಗರಿಷ್ಠ ಮಟ್ಟವನ್ನು ತಲುಪುವವರೆಗೆ ಸೂರ್ಯನ ಚಟುವಟಿಕೆಯು ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ.ಸೌರ ಬಿರುಗಾಳಿಗಳು ಭೂಮಿಯ ಕಡೆಗೆ ಕರೋನಲ್ ಮಾಸ್ ಎಜೆಕ್ಷನ್‌ಗಳನ್ನು (CME) ಬಿಡುಗಡೆ ಮಾಡುತ್ತವೆ. ಇದು ಭೂಮಿಯ ಮೇಲೆ ಭೂಕಾಂತೀಯ ಬಿರುಗಾಳಿಗಳಿಗೆ ಕಾರಣವಾಗುತ್ತದೆ ಮತ್ತು ಇಲ್ಲಿ ಎಲ್ಲಾ ವಿದ್ಯುತ್ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಸ್ಥೆ ತಿಳಿಸಿದೆ.ಭೂಮಿಯ ಸಂವಹನ ವ್ಯವಸ್ಥೆಗಳ ಮೇಲೆ ಸೌರ ಬಿರುಗಾಳಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಲು ನಾಸಾ ಸೌರ ಜ್ವಾಲೆಯ ಘಟನೆಯ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸೌರ ಬಿರುಗಾಳಿಯ ಎಚ್ಚರಿಕೆಕರೋನಲ್ ಮಾಸ್ ಎಜೆಕ್ಷನ್‌ಗಳ ಚಟುವಟಿಕೆಯೊಂದಿಗೆ ಸೌರ ಜ್ವಾಲೆಗಳು ಮತ್ತು ಸೌರ ಸ್ಫೋಟಗಳು ಸೇರಿಕೊಂಡಂತೆ ಬಾಹ್ಯಾಕಾಶ ಹವಾಮಾನ ಘಟನೆಗಳಲ್ಲಿ ವೈಪರೀತ್ಯಗಳುಂಟಾಗುತ್ತದೆ.ಇದು ರೇಡಿಯೋ ಸಂವಹನಗಳು, ವಿದ್ಯುತ್ ಶಕ್ತಿ ಗ್ರಿಡ್ಗಳು ಮತ್ತು ನ್ಯಾವಿಗೇಷನ್ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರುತ್ತದೆ ಜೊತೆಗೆ ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ನಾಸಾ ಸೂಚಿಸಿದೆ.ನಾಸಾ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯನ್ನು ಬಳಸಿಕೊಂಡು ಸೌರ ಬಿರುಗಾಳಿಯ ಕುರಿತು ಪೂರ್ವ ಎಚ್ಚರಿಕೆಯನ್ನು ನೀಡಲು ಸಿದ್ಧಗೊಂಡಿದೆ.

ಬಾಹ್ಯಾಕಾಶ ಹವಾಮಾನವನ್ನು ಊಹಿಸಲು ನಾಸಾ ಎಐ ಮಾಡೆಲ್ ಡೇಗರ್ ಅನ್ನು ಸಿದ್ಧಪಡಿಸಿದ್ದು ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

Back to top button