ರಾಯಚೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಿಕರ ಅಗ್ನಿ ಅವಘಡ
ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಲ್ಯಾಬೋರೇಟರಿ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಹಾನಿ ಸಂಭವಿಸಿದೆ.
ಬೆಂಕಿ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಕೆಮಿಕಲ್ ಸುಟ್ಟು ಕರಕಲಾಗಿದೆ.
ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಹೊತ್ತಿದ್ದರಿಂದ ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ. ಇತರೆ ಕೆಮಿಕಲ್ ಕಂಪನಿಗೂ ಬೆಂಕಿ ಆವರಿಸುವ ಆತಂಕ ಎದುರಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿಶಾಮಕ ತಂಡ ಕಳೆದ ಐದು ಗಂಟೆಯಿಂದ ಬೆಂಕಿ ನಂದಿಸುತ್ತಿದ್ದರೂ ಅಗ್ನಿ ತಹಬಂದಿಗೆ ಬಂದಿಲ್ಲ. ಘಟನೆಯಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ಕಾರ್ಖಾನೆಯ ಸುತ್ತಲಿನ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮನೆ, ಗುಡಿಸಲಿಗೂ ಬೆಂಕಿ ಹಬ್ಬುವ ಆತಂಕ ಇದೆ. ಇತ್ತ ಕಾರ್ಖಾನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾವು-ನೋವುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವನಾಥ್ ಸಾಹುಕಾರ್ ರಾಯಚೂರು