ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕೃಷ್ಣನಾಯಕ
ಹೆಚ್.ಡಿ.ಕೋಟೆ: ತಮ್ಮ ಬಲಿಷ್ಠತೆಯನ್ನು ಪ್ರದರ್ಶಿಸಲು ರಾಷ್ಟ್ರೀಯ ಪಕ್ಷಗಳು ತಾ ಮುಂದು ನಾ ಮುಂದು ಎಂದು ನಿಂತಿವೆ. ಅದರಂತೆ ಇಂದು ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಟಕ್ಕರ್ ಕೊಡಲು ಬಿಜೆಪಿ ಪಕ್ಷ ನಿಂತಿತ್ತು ಬಾರಿ ಜನಸ್ತೋಮದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಬಿಜೆಪಿ ಉಮೇದುದಾರರಾದ ಕೆ.ಎಂ ಕೃಷ್ಣ ನಾಯ್ಕರವರು ನಾಮಪತ್ರವನ್ನು ಸಲ್ಲಿಸಿದರು.
ಬಿಜೆಪಿ ವರಿಷ್ಠರೊಂದಿಗೆ ಪೂಜೆಯನ್ನು ಸಲ್ಲಿಸಿ ನಂತರ ರಾಷ್ಟ್ರೀಯ ನಾಯಕರ ಹಾಗೂ ಚಲನಚಿತ್ರ ನಟ ಸುದೀಪ್ ರವರ ಭಾವಚಿತ್ರವನ್ನು ಹಿಡಿದು ಗದ್ದಿಗೆ ಸರ್ಕಲ್ ನಿಂದ ತಾಲೂಕು ಕಚೇರಿಗೆ ತೆರಳಿ ತಮ್ಮ ಉಮೇದುದಾರಿಕೆಯನ್ನು ಚುನಾವಣಾ ಅಧಿಕಾರಿಯಾದ ಕುಮುದಾ ಶರತ್ ರವರಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ, ನಂತರ ಮಾತನಾಡಿದ ಕೃಷ್ಣನಾಯಕ ರವರು ತಾಲೂಕಿನಲ್ಲಿ ಕಳೆದ ಪರಿಸ್ಥಿತಿಯಿಂದಲೂ ಜನಸೇವೆಯನ್ನು ಮಾಡುತ್ತಾ ಬಂದಿದ್ದು, ಆಂಬುಲೆನ್ಸ್ ವ್ಯವಸ್ಥೆ ಆರೋಗ್ಯ ಹಾಗೂ ಆಹಾರ ಕಿಟ್ ವಿತರಣೆ ಜೊತೆಗೆ ಹಸಿದ ಹೊಟ್ಟೆಗೆ ಅನ್ನ ನೀಡುವ ಕೆಲಸವನ್ನು ಅಪ್ಪಾಜಿ ಕ್ಯಾಂಟೀನ್ ಹೆಸರಲ್ಲಿ ಮಾಡುತ್ತಾ ಬಂದಿದ್ದು, ಜೆಡಿಎಸ್ ಪಕ್ಷವನ್ನ ತಳಮಟ್ಟದಿಂದಲೂ ಸಂಘಟಿಸಲು ಶ್ರಮಿಸಿದ್ದೆ. ಆದರೆ ಜೆಡಿಎಸ್ ಪಕ್ಷದಿಂದ ಟಿಕೆಟ್ ದೊರೆಯದ ಕಾರಣ ಜೆಡಿಎಸ್ ವರಿಷ್ಠರ ನೆಡೆಗೆ ಬೇಸತ್ತು. ಬಿಜೆಪಿ ಪಕ್ಷವನ್ನ ಸೇರಿದ್ದು, ಪಕ್ಷದ ಅನೇಕ ಮಹನೀಯರ ಸಹಕಾರದೊಂದಿಗೆ ಇಂದು ನಾಮಪತ್ರವನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರ ನಡೆಯಂತೆ ನಾನು ನಡೆಯುತ್ತೇನೆ ಎಂದು ತಿಳಿಸಿದರು.
ಈ ವೇಳೆ ಪಕ್ಷದ ಉಸ್ತುವಾರಿಗಳಾದ ಅಶ್ವಥ್ ನಾರಾಯಣ್, ಅಪ್ಪಣ್ಣ, ಹೆಚ್ ವಿ ಕೃಷ್ಣಸ್ವಾಮಿ, ಸಿ.ವಿ.ನಾಗರಾಜು ಮೊತ್ತ ಬಸವರಾಜಪ್ಪ ಗುರುಸ್ವಾಮಿ ಹಾಗೂ ಪಕ್ಷದ ಗಣ್ಯರು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು.
ಮಲಾರ ಮಹದೇವಸ್ವಾಮಿ