Breaking news: ಬಿಜೆಪಿ ಬಿಟ್ಟ ಮೇಲೆ ಶೆಟ್ಟರ್ ನಿಜವಾಗ್ಲೂ ಕಾಂಗ್ರೆಸ್ ಸೇರ್ತಾರಾ?
ಬೆಂಗಳೂರು : ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದ್ದು ಮಾಜಿ ಡಿಸಿಎಂ ಪಕ್ಷ ತೊರೆದ ಬೆನ್ನಲ್ಲೆ ಮಾಜಿ ಸಿಎಂ ಕೂಡ ನೀಡಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕತ್ವಕ್ಕೆ ರಾಜೀನಾಮೆ ನೀಡಲಿದ್ದು ರಾಜೀನಾಮೆ ಬೆನ್ನಲ್ಲೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು ಜಗದೀಶ್ ಶೆಟ್ಟರ್ ಜತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಮುಕ್ತಾಯ ಎಂಬ ಮಾಹಿತಿ ಇದ್ದು ದೂರವಾಣಿ ಮೂಲಕ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಿದೆ ಎನ್ನಲಾಗಿದೆ. ಶಾಮನೂರು ಶಿವಶಂಕರಪ್ಪ ಮೂಲಕ ಡಿ ಕೆ ಶಿವಕುಮಾರ್ ಆಪರೇಷನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಶಾಮನೂರು ಶಿವಶಂಕರಪ್ಪ ಮತ್ತು ಜಗದೀಶ್ ಶೆಟ್ಟರ್ ಸಂಬಂಧಿಕರಾಗಿದ್ದಾರೆ. ಹೀಗಾಗಿ ಬೀಗರನ್ನು ಪಕ್ಷ ಸೇರಿಸುವಲ್ಲಿ ಶಾಮನೂರು ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಅದಲ್ಲದೆ ಜಗದೀಶ್ ಶೆಟ್ಟರ್ ಬಂದರೆ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಕೂಡ ಸ್ವಾಗತ ಎಂದು ಹೇಳುತ್ತಿದ್ದಾರೆ. ಈ ನಡುವೆ ಎರಡು ದಿನ ರಾಜ್ಯ ಪ್ರವಾಸದಲ್ಲಿ ರಾಹುಲ್ ಗಾಂಧಿ ಕೂಡ ಇರಲಿದ್ದಾರೆ. ಹೀಗಾಗಿ ಇಂದು ಅಥವಾ ನಾಳೆ ರಾಹುಲ್ ಸಮ್ಮುಖದಲ್ಲಿ ಸೇರುವ ಸಾಧ್ಯತೆ ಇದೆ. ಇದರಿಂದಾಗಿ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರಿದ ಬಳಿಕ ಮತ್ತೊಬ್ಬ ಪ್ರಭಾವಿ ಲಿಂಗಾಯತ ನಾಯಕನಿಗೆ ಗಾಳ ಹಾಕಿದಂತೆ ಆಗಿದೆ.