ಕ್ರೀಡೆ

IND vs AUS| ಸ್ಟಾರ್ಕ್‌ ದಾಳಿಗೆ ಭಾರತ ತತ್ತರ: ಆಸ್ಟ್ರೇಲಿಯಾಕ್ಕೆ 10 ವಿಕೆಟ್‌ಗಳಿಂದ ಭರ್ಜರಿ ಜಯ

ದು ವಿಕೆಟ್‌ಗಳನ್ನು ಗಳಿಸಿದ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸ್ವಿಂಗ್ ಮುಂದೆ ಭಾರತ ತಂಡದ ಬ್ಯಾಟರ್‌ಗಳು ಮುಗ್ಗರಿಸಿದರು.ಇದರಿಂದಾಗಿ ಭಾರತ ತಂಡವು ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಸೋತಿತು.

ಮೂರು ಪಂದ್ಯಗಳ ಸರಣಿಯು 1-1ರಿಂದ ಸಮವಾಗಿದೆ. ಇನ್ನೂ ಒಂದು ಪಂದ್ಯ ಬಾಕಿಯಿದೆ.

ಭಾನುವಾರ ವಿಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟಾರ್ಕ್ (53ಕ್ಕೆ5) ಅವರ ಬೌಲಿಂಗ್‌ ಮುಂದೆ ಭಾರತ ತಂಡವು 26 ಓವರ್‌ಗಳಲ್ಲಿ 117 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಕೇವಲ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್‌ ಗಳಿಸಿ ಜಯಿಸಿತು. ತಂಡವು ಜಯದ ಗಡಿ ಮುಟ್ಟಿದಾಗ ಇನಿಂಗ್ಸ್‌ನಲ್ಲಿ ಇನ್ನೂ 234 ಎಸೆತಗಳು ಬಾಕಿ ಇದ್ದವು.

ಟ್ರಾವಿಸ್ ಹೆಡ್ (ಔಟಾಗದೆ 51) ಹಾಗೂ ಮಿಚೆಲ್ ಮಾರ್ಷ್ (ಅಜೇಯ 66) ಅರ್ಧಶತಕ ಗಳಿಸಿದರು. ಅದರಲ್ಲೂ ಮಾರ್ಷ್ ಅರ್ಧ ಡಜನ್ ಸಿಕ್ಸರ್‌ ಸಿಡಿಸಿದರು. ಅವರು ಮೊದಲ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ್ದರು.

ಬ್ಯಾಟಿಂಗ್ ವೈಫಲ್ಯ: ವಿರಾಟ್ ಕೊಹ್ಲಿ (31; 35ಎ), ರವೀಂದ್ರ ಜಡೇಜ (16; 39ಎ) ಹಾಗೂ ಅಕ್ಷರ್ ಪಟೇಲ್ (29; 29ಎ) ಅವರಷ್ಟೇ ಪ್ರವಾಸಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುವ ಪ್ರಯತ್ನ ಮಾಡಿದರು. ಉಳಿದವರು ಸ್ಟಾರ್ಕ್‌ ದಾಳಿಯ ಮುಂದೆ ತತ್ತರಿಸಿದರು.

ಸ್ಟಾಕ್ ಅವರು ರೋಹಿತ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೆ.ಎಲ್. ರಾಹುಲ್ ಮತ್ತು ಕೊನೆಯಲ್ಲಿ ಸಿರಾಜ್ ವಿಕೆಟ್‌ಗಳನ್ನು ಕಬಳಿಸಿದರು.

ಶುಭಮನ್ ಗಿಲ್ ಮೊದಲ ಓವರ್‌ನಲ್ಲಿಯೇ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಸತತ ಎರಡನೇ ಪಂದ್ಯದಲ್ಲಿ ಕ್ರಾಸ್‌ಬ್ಯಾಟ್ ಆಡಲು ಹೋಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಸೊನ್ನೆ ಸುತ್ತಿದರು.

ಕೊಹ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ, ಮಧ್ಯಾಹ್ನದ ಬಿಸಿಲಿನಲ್ಲಿ ಪಿಚ್‌ನಲ್ಲಿದ್ದ ಸತ್ವವನ್ನು ಅರಿತು ಬೌಲಿಂಗ್ ಮಾಡಿದ ನೇಥನ್ ಎಲ್ಲಿಸ್‌ ಎಸೆತದಲ್ಲಿ ವಿರಾಟ್ ಎಲ್‌ಬಿಡಬ್ಲ್ಯು ಆದರು.

ಇದರಿಂದಾಗಿ ತಂಡವು ನೂರು ರನ್‌ ಗಳಿಸುವ ಮುನ್ನವೇ ಆಲೌಟ್ ಆಗುವ ಆತಂಕ ಎದುರಾಗಿತ್ತು. ಆದರೆ ಎಡಗೈ ಜೋಡಿ ಜಡೇಜ ಮತ್ತು ಅಕ್ಷರ್ ಪಟೇಲ್ ಒಂದಿಷ್ಟು ರನ್‌ಗಳ ಕಾಣಿಕೆ ನೀಡಿದರು. ಅಕ್ಷರ್ ಎರಡು ಸಿಕ್ಸರ್‌ ಮತ್ತು ಒಂದು ಬೌಂಡರಿ ಕೂಡ ಗಳಿಸಿದರು. ಸೀನ್ ಅಬಾಟ್ ಮೂರು ವಿಕೆಟ್ ಗಳಿಸಿದರು.

ಮೂರನೇ ಹಾಗೂ ಕೊನೆಯ ಪಂದ್ಯವು ಇದೇ 22ರಂದು ಚೆನ್ನೈನಲ್ಲಿ ನಡೆಯಲಿದೆ.

ಅಂತಿಮ ಪಂದ್ಯವು ಮಾರ್ಚ್ 22ರಂದು ಚೆನ್ನೈಯಲ್ಲಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button