ಗದಗ

ಮತದಾನ ಕುರಿತು ಜಾಗೃತಿ ಅಭಿಯಾನ

ಗದಗ: ನಗರದ ಬೆಟಗೇರಿಯ ಕೆಲ ಭಾಗದಲ್ಲಿ ಮೇ 10-05-2023 ಬುಧವಾರದಂದು ಸಾರ್ವತ್ರಿಕ ಚುನಾವಣಾ ಪ್ರಯುಕ್ತ, ಸ್ವೀಪ್ ಕಮಿಟಿ ಗದಗ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಗದಗ ಜಿಲ್ಲಾ ದಂಡಾಧಿಕಾರಿಗಳ ನೇತೃತ್ವದಲ್ಲಿ ತಂಡಗಳಾಗಿ ಬೀದಿ ನಾಟಕ ಪ್ರದರ್ಶನ ಹಾಗೂ ಪಂಜಿನ ಮೆರವಣಿಗೆ ಜೊತೆ ಮೇಣದ ದೀಪ ಹಚ್ಚಿಕೊಂಡು, ಗದಗ ಬೆಟಗೇರಿ ಭಾಗದ ಹಾಕಿ ಸ್ಟೇಡಿಯಂ ಸುತ್ತ ಮುತ್ತ,ಹಾಗೂ ಕನ್ಯಾಳ ಅಗಸಿ ಮೂಲಕ ಬೆಟಗೇರಿ ಅಂಬಾಭವಾನಿ ಸರ್ಕಲ್ ನಿಂದ ಗದುಗಿನ ಪಾಲಾ ಬಾದಾಮಿ ರೋಡ್ ನಲ್ಲಿರುವ ಆಡಿಟೋರಿಯಂ ನಲ್ಲಿ ಮೆರವಣಿಗೆ ಮುಕ್ತಾಯಗೊಳಿಸಿ ಮತದಾರರ ಹಾಗೂ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆದ ಶ್ರೀ ಮಾರುತಿ ಬ್ಯಾಕೋಡ ಅವರು ಮತದಾನ ವಿಶೇಷತೆ ಹಾಗೂ ಯಾಕೆ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಮಾಹಿತಿ ನೀಡಿದರು.

ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರಿಗೆ ಹಾಗೂ ಅಂಗವೈಕಲ್ಯಾ ಹೊಂದಿದೆ ಮತದಾರರಿಗೆ ಮನೆಬಾಗಿಲಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿರುವ ಬಗ್ಗೆ ಜಾಗೃತಿ ಮೂಡಿಸಿದರು, ಮೆರವಣಿಗೆಯಲ್ಲಿ ಸ್ವೀಪ್ ಕಮಿಟಿ ಗದಗ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಗದಗ ಜಿಲ್ಲಾ ದಂಡಾಧಿಕಾರಿಗಳು ಆದಂತ ಶ್ರೀಮತಿ ವೈಶಾಲಿ ಎಂ,ಎಲ್, ಜಿಲ್ಲಾ ಪಂಚಾಯತ್ ಅಧಿಕಾರಿ ಶ್ರೀಮತಿ.ಸುಶೀಲಾ ಬಿ , ಸಹಾಯಕ ಕಮಿಷನರ್ ಶ್ರೀಮತಿ ಅನ್ನಪೂರ್ಣ ನಾಗಪ್ಪ ಮುದುಕಮ್ಮನವರ್, ಗದುಗಿನ ಅಂತರರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ,ಗದಗ ನಗರಾಭಿವೃದ್ಧಿ ಅಧಿಕಾರಿ ಶ್ರೀ ಮಾರುತಿ ಬ್ಯಾಕೋಡ, ನಗರಸಭೆ ಪೌರಾಯುಕ್ತರು ಶ್ರೀ ರಮೇಶ್ ಸುಣಗಾರ,ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಸ, ಗದಗ ಜಿಲ್ಲಾ ಸರ್ಕಾರಿ ನೌಕರರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಹಿಳಾ ಬಿ,ಎಲ್,ವೂ, ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮಹಿಳಾ ಮಣಿಗಳು ಹಾಗೂ ಕುಂದಗೋಳದ ಅರುಣೋದಯ ಕಲಾ ತಂಡಗಳು ಭಾಗವಹಿಸಿದ್ದರು.


ಪ್ರದೀಪ್ ಬೆಳಮೇಗೌಡ, tv8 ಕನ್ನಡ, ಗದಗ

Related Articles

Leave a Reply

Your email address will not be published. Required fields are marked *

Back to top button