ಧಾರವಾಡ
ಎಸ್.ಎಸ್.ಬಿ ಹಾಗೂ ಪೊಲೀಸರಿಂದ ಪಥಸಂಚಲನ
ಅಣ್ಣಿಗೇರಿ- ಕರ್ನಾಟಕ ರಾಜ್ಯ ವಿಧಾಸಭಾ ಚುನಾವಣ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಸಸ್ತ್ರ ಸೀಮಾ ಬಲದಿಂದ (ಮಿಲಟರಿ ಪೋರ್ಸ್ )ಪಥಸಂಚಲನ ಮಾಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ.ದೃವರಾಜ ಪಾಟೀಲ, ಅಣ್ಣಿಗೇರಿ ಪೋಲಿಸ್ ಠಾಣಾಧಿಕಾರಿ ಕೀರಣ ಮೋಹಿತೆ, ಹೆಚ್ಚುವರಿ ಪೊಲೀಸ್ ಠಾಣಾಧಿಕಾರಿ ಬಸವನಗೌಡ ಮಲ್ಲೆಪ್ಪನವರ ಹಾಗೂ ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು. ಪಥಸಂಚಲನಕ್ಕೆ ಅಮೃತೇಶ್ವರ ಟೆಂಪೊ ಚಾಲಕರ ಮತ್ತು ಮಾಲೀಕರ ಸಂಘದಿಂದ ಮತ್ತು ಈರಮ್ಮಾ ಇವರಿಂದ ಪುಸ್ಪನಮನವನ್ನು ಸಾರ್ವಜನಿಕರಿಂದ ಹಾಕಲಾಯಿತು.
ರೈತ ಮುಖಂಡರಾದ ಅರ್ಜುನಪ್ಪ ದಳವಾಯಿ ಅವರು ಮಜ್ಜಿಗಿ ವಿತರಣೆ ಮಾಡಿದರು. ಪಥಸಂಚಲನವು ಅಣ್ಣಿಗೇರಿಗೆ ಬರುತಿದಂತೆ ಮಹಿಳೆಯರು ಆರತಿ ಬೆಳಗಿ ಬರ ಮಾಡಿಕೊಂಡರು. ಮತ್ತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಪೊಲೀಸ್ ಠಾಣೆಯಾಗಿ ಬಂದು ತಲುಪಿತು.
ಈರಪ್ಪ ಗುರಿಕಾರ, tv8 ಕನ್ನಡ, ಅಣ್ಣಿಗೇರಿ