ಮತ್ತೊಂದು ಅವಕಾಶ ಕೊಡಿ: ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಮನವಿ
ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಬೂತ್ ಮಟ್ಟದಲ್ಲಿ ಕಾರ್ಯಕರ್ತ ಸಭೆ ನಡೆಸಿದರು.ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿ ರಂಗನಬೆಟ್ಟದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರ ಸಭೆ ನಡೆಸಿದರು. ನಂತರ ಎನ್.ಮಹೇಶ್ ಮಾತನಾಡಿ ಈ ದಿನ ನನ್ನ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗಿದೆ.
ಬಿಳಿಗಿರಿ ರಂಗನಬೆಟ್ಟ, ಯರಗಂಬಳ್ಳಿ ಹಾಗೂ ಗುಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಭೆಗಳನ್ನು ನಡೆಸಿದ್ದು ನಾನು ಈ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು ವರಿಷ್ಟರ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ್ದೇನೆ,ಕಳೆದ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಹಲವಾರು ಅಭಿವೃದ್ಧಿ ಕೆಲಸ ಗಳನ್ನು ಮಾಡಿದ್ದೇನೆ. ನನಗೆ ಈ ಬಾರಿ ಮತ್ತೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪಿ.ಮಹೇಶ್, ಚಾಮುಲ್ ಅಧ್ಯಕ್ಷ ನಾಗೇಂದ್ರ,ಗ್ರಾಮ ಪಂಚಾಯತಿ ಅಧ್ಯಕ್ಷೆ ಮಮತಾ, ಪುಟ್ಟಣ್ಣ ಪುಟ್ಟು ಮಾದಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಶೇಖರ್, ಚಿಕ್ಕಣ್ಣ ರಾಜಪ್ಪ ವೆಂಕಟೇಶ್ ಗುಂಬಳ್ಳಿ ರಾಜು, ಕೃಷ್ಣಪುರ ಮಹೇಶ್ ಚಿನ್ನಸ್ವಾಮಿಗೌಡ ಚಿಕ್ಕಯ್ಯ, ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ8 ಕನ್ನಡ ಯಳಂದೂರು