ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮುಗಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ.
ತೆಪ್ಪಕಾಡು ಆನೆ ಶಿಬಿರದಲ್ಲಿ ಪ್ರಧಾನಿ ಮೋದಿ, ದಿ ಎಲಿಫಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದ ಖ್ಯಾತಿಯ ಬೆಳ್ಳಿ-ಬೊಮ್ಮ ದಂಪತಿಗೆ ಸನ್ಮಾಮಿಸಿದರು.
ಈ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ.
ತೆಪ್ಪಕಾಡು ಆನೆ ಶಿಬಿರದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ, ದೇಶದ ವಿವಿಧ ಹುಲಿ ಯೋಜನೆಯ ನಿರ್ದೇಶಕರ ಜೊತೆ ಸಂವಾದ ನಡೆಸಲಿದ್ದಾರೆ.