ಆದ್ಯಾತ್ಮ
ಯಳಂದೂರು ಪಟ್ಟಣದ ಗುರು ಕೃಪಾ ವೈನ್ಸ್ ಗೆ ಬೀಗ ಮುದ್ರೆ
ಯಳಂದೂರು. ಪಟ್ಟಣದ ಗುರು ಕೃಪಾ ವೈನ್ಸ್ ನಲ್ಲಿ ದಾಸ್ತಾನು ಮಾಡಿದ್ದ ಹೆಚ್ಚುವರಿ ಮಧ್ಯದ ಬಗ್ಗೆ ಲೆಕ್ಕ ನೀಡದ ಕಾರಣ ಪಟ್ಟಣದ ಗುರುಕೃಪ ವೈನ್ಸ್ ಗೆ ಅಬಕಾರಿ ಇಲಾಖೆಯ ಬಿಗಮುದ್ರೆ ಹಾಕಿದೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಗುರುಕೃಪ ವೈಸ್ ನಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ ಹೆಚ್ಚುವರಿ ಮಧ್ಯ ಸಂಗ್ರಹಿಸಿದ್ದು ಗಮನಕ್ಕೆ ಬಂದಿದ್ದು, ಸಂಬಂಧ ಪಟ್ಟವರು ಸರಿಯಾಗಿ ಲೆಕ್ಕ ನೀಡಿರಲಿಲ್ಲ,ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮುಂದುವರಿದ ಕಾನೂನು ಕ್ರಮವಾಗಿ ಅಬಕಾರಿ ನಿರೀಕ್ಷಕರಾದ ವೀಣಾ ಅವರ ನೇತೃತ್ವ ತಂಡವು ವೈನ್ಸ್ ನಲ್ಲಿದ್ದ ಎಲ್ಲ ಮದ್ಯವನ್ನು ವಶಕ್ಕೆ ಪಡೆದಿದೆ. ವಿಧಾನಸಭಾ ಚುನಾವಣೆ ಮುಗಿಯುವ ತನಕ ಅಂಗಡಿಯನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ 8 ಕನ್ನಡ, ಯಳಂದೂರು