ಬೆಂಗಳೂರು ಗ್ರಾಮಾಂತರ

ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸೇರಿದ್ದು ಮಸಣ


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಯಳಚಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಗ್ರಾಮದ ಹನಿಪ್ (13) ಮೃತ ಬಾಲಕನಾಗಿದ್ದು, ಈ ಬಾಲಕ ಇಂದು ಮಧ್ಯಾಹ್ನ 1:00 ಸಮಯದಲ್ಲಿ ತನ್ನ ಅಣ್ಣ ಹಾಗೂ ಕುಟುಂಬಸ್ಥರ ಜೊತೆ ಕೆರೆಯಲ್ಲಿ ಈಜಾಡಲು ಹೋಗಿದ್ದು ಈ ಸಮಯದಲ್ಲಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸವನಪ್ಪಿದ್ದಾನೆ.

ಘಟನೆ ನಂತರ ಇತನ ಜೊತೆಯಲ್ಲಿದ್ದ ಇತನ ಅಣ್ಣ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ತಿಳಿದ ಸ್ಥಳಕ್ಕೆ ಆಗಮಿಸಿದ ನಂದಗುಡಿ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯವರು ಮೃತ ಯುವಕನಶವ ಹೊರತೆಗೆದು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಘಟನೆ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲದಿನಗಳ ಹಿಂದೆಯಸ್ಟೆ ಈ ಗ್ರಾಮದ ಕೆರೆಗೆ ನೀರನ್ನು ಹರಿಸಿದ್ದು ಈಜು ಬಾರದ ಯುವಕರು ಇಂತಹ ದುಸ್ಸಾಹಕ್ಕೆ ಮುಂದಾಗಿ ತಮ್ಮ ಪ್ರಾಣವನ್ನೇ ತತ್ತಿದ್ದಾರೆ. ಮೃತ ಯುವಕನ ಕುಟುಂಬದಲ್ಲಿ ಈತ ಹಾಗೂ ಈತನ ಅಣ್ಣ ಇಬ್ಬರು ಮಕ್ಕಳಿದ್ದು ಈಗ ಎರಡನೇ ಮಗನ ಸಾವಿನಿಂದ ಕುಟುಂಬಸ್ಥರಲ್ಲಿ ಅಕ್ರಂದನೆ ಮುಗಿಲು ಮುಟ್ಟಿದೆ.

ತೇಜಸ್, tv8 ಕನ್ನಡ, ಹೊಸಕೋಟೆ

Related Articles

Leave a Reply

Your email address will not be published. Required fields are marked *

Back to top button