ಡಾ.ಎಸ್.ಸುಗಂಧರಾಜನ್ ರವರಿಗೆ ಬೀಳ್ಕೊಡುಗೆ ಸಮಾರಂಭ
ಯಳಂದೂರು: ಪಶು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ, ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ. ಎಸ್ ಸುಗಂಧರಾಜನ್ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಯಳಂದೂರು ಪಟ್ಟಣದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಪ್ರತಿಧ್ವನಿ ಸಾಂಸ್ಕೃತಿಕ ಕಲಾವೇದಿಕೆ, ರಂಗದೇಗುಲ ಕಲಾ ವೇದಿಕೆ ಹಾಗೂ ಡಾ. ಸುಗಂಧರಾಜನ್ ಗೆಳೆಯರ ಬಳಗ ಯಳಂದೂರು ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ ಇ ಓ ಕಾಂತರಾಜು ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಮಾತನಾಡಿ ಡಾ. ಸುಗಂಧರಾಜನ್ ರವರು ನಿವೃತ್ತ ಜೀವನ ಸಖಕರವಾಗಲಿ ಎಂದು ನುಡಿದರು. ಡಾ. ಸುಗಂಧರಾಜನ್ ರವರು ವೃತ್ತಿಯಲ್ಲಿ ಪಶು ವೈದ್ಯರು ಹಾಗೂ ಕಲಾವಿದರು ಆಗಿರುವುದರಿಂದ ಹಾಡನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಪ ನೊಂದಣಾಧಿಕಾರಿ ರುದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಕೇಶವಮೂರ್ತಿ, ರಮೇಶ್, ಶ್ರೀನಿವಾಸ್, ಚಕ್ರವರ್ತಿ,ಕಲಾವಿದರು ಅಂಬಳೆ ಸಿದ್ದರಾಜು,ನಾಗೇಂದ್ರ, ಜೈ ಗುರು, ಶಾಂತರಾಜು, ಜಾನಪದ ಮಹೇಶ್ ಹಾಗೂ ಅಭಿಮಾನಿ ಬಳಗದವರು ಹಾಜರಿದ್ದರು….
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ 8 ಕನ್ನಡ, ಯಳಂದೂರು