ವಿಜಯಪುರ
ದಾಖಲೆ ಇಲ್ಲದ ನಗದು ಹಾಗೂ ಚಿನ್ನ ವಶಕ್ಕೆ
ಚಡಚಣ: ಸಮೀಪದ ದೇವರನಂಬರಿಗಿ ಕ್ರಾಸ್ ಹತ್ತಿರ ಅನುಮಾನಾಸ್ಸವಾಗಿ ತಿರುಗುತ್ತಿದ್ದ ಕಾರಿನ ಮೇಲೆ ಚಡಚಣ ಪೊಲೀಸರು ದಾಳಿ ಮಾಡಿ ದಾಖಲೆ ಇಲ್ಲದ 27 ಲಕ್ಷ ರೂ.ಮೌಲ್ಯದ 480 ಗ್ರಾಂ ಚಿನ್ನ ಹಾಗೂ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಸೋಲಾಪುರ ನಿವಾಸಿ ವಿಜಯ ಪಡಕೊಳ್ಳರ್ ಬಂಧಿತ. ಚಿನ್ನಾಭರಣ ಹಾಗೂ ನಗದಿನ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಚಡಚಣ ಸಿಪಿಐ ಎಸ್ಎಮ್ ಪಾಟೀಲ ತಿಳಿಸಿದ್ದಾರೆ. ದಾಳಿಯಲ್ಲಿ ಚಡಚಣ ಪಿಎಸ್ಐ ಸಂಜು ತಿಪ್ಪಾರೆಡ್ಡಿ ಮತ್ತು ಸಿಬ್ಬಂದಿ ಇದ್ದರು. ಚಡಚಣ ಸಮೀಪದ ದೇವರ ನಿಂಬರಗಿ ಕ್ರಾಸ್ ಹತ್ತಿರ ಕಾರನ್ನು ವಶಕ್ಕೆ ಪಡೆದು ಅದರಲ್ಲಿದ್ದ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ 6 ಲಕ್ಷ ರೂಪಾಯಿ ನಗದನ್ನು ಚಡಚಣ ಪೊಲೀಸ್ ತಂಡ ವಶಕ್ಕೆ ಪಡೆದಿದೆ.
ಶ್ರೀಕಾಂತ್ ಬಗಲಿ, tv8 ಕನ್ನಡ, ವಿಜಯಪುರ