ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸ್ಸು ಹಿನ್ನೆಲೆ ಸಂಭ್ರಮಾಚರಣೆ
ಕುಷ್ಟಗಿ: ಕೊನೆಯ ವಿಧಾನ ಸಭಾ ಅಧಿವೇಶನದಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿವೇಶದಲ್ಲಿ ಬಿಲ್ ಪಾಸ್ ಮಾಡಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿ ಮಾಡಿದ್ದು ಸಂತಸದ ವಿಚಾರ ಎಂದು ಮಾದಿಗ ಮಹಾಸಭಾ ತಾಲೂಕ ಅಧ್ಯಕ್ಷ ನಾಗರಾಜ ಮೇಲಿನ ಮನಿ ಹೇಳಿದರು.
ಸುಮಾರು 30 ವರ್ಷಗಳಿಂದ ಹಲವಾರು ರೀತಿಯಲ್ಲಿ ಹೋರಾಟಗಳನ್ನು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದಾಗ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಲು ಅಂದಿನ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಹೋರಾಟದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕುಷ್ಟಗಿ ತಾಲೂಕಿನ ದಿವಂಗತ ಶರಣಪ್ಪ ಬೋದೂರು, ಮುರುಳೀಧರ ಮೇಲಿನ ಮನಿ, ಮರಿಸ್ವಾಮಿ ಕನಕಗಿರಿ, ಯಮನೂರ ಮೇಲಿನ ಮನಿ ಸೇರಿದಂತೆ ಹಲವಾರು ಸಮಾಜದ ಯುವಕರು, ಹಿರಿಯರು ಹೋರಾಟದ ಮುಂಚೂಣಿಯಲ್ಲಿದ್ದರು.
ಇದು ಹಿಂದೆ ಕೂಡಲಸಂಗಮ ದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಪಾದ ಯಾತ್ರೆ ಮೂಲಕ ಹೋರಾಟ ಮಾಡಿದ ಮಹನೀಯರಿಗೆ ಸಂದ ಜಯ. ಮಾದಿಗ ಮತ್ತು ಚಲವಾದಿ ಸಮಾಜ ಸೇರಿದಂತೆ 101 ಉಪ ಪಂಗಡಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂದು ನಾಗರಾಜ ಮೇಲಿನ ಮನಿ ಸಂತಸ ವ್ಯಕ್ತಪಡಿಸಿದ್ದಾರೆ.
ನಾಗರಾಜ ಮೇಲಿನ ಮನಿ, ಕೃಷ್ಣಮೂರ್ತಿ ಟೆಂಗುಂಟಿ, ಅಮರೇಶ ಚಲವಾದಿ, ಶರಣಪ್ಪ ಚಲವಾದಿ, ಚಂದ್ರಶೇಖರ ಹಿರೇಮನಿ, ಬಸವರಾಜ ಶೇಬನಕಟ್ಟಿ, ಯಮನೂರ ಮೇಲಿನಮನಿ, ಮರಿಸ್ವಾಮಿ ಕನಕಗಿರಿ, ಶಂಕರ್ ಟಿ ಕಲ್ಲಬಾವಿ, ಶರಣು ತೆಗ್ಗಿಹಾಳ, ಗ್ಯಾನಪ್ಪ ಚಲವಾದಿ, ರಮೇಶ ಚಲವಾದಿ, ಮಾರುತಿ ಹಲಗಿ, ಚನ್ನಬಸವ ಪರಕಿ ಸೇರಿದಂತೆ ಮಾದಿಗ ಮತ್ತು ಚಲವಾದಿ ಸಮಾಜದ ಮುಖಂಡರು ಯುವಕರು ಭಾಗಿಯಾಗಿದ್ದರು.
ಶರಣಪ್ಪ ಗುಮಗೇರಿ, tv8 ಕನ್ನಡ, ಕುಷ್ಟಗಿ