ಧಾರವಾಡ

ವಿದ್ಯಾಕಾಶಿಯಲ್ಲಿ 15ನೇ ಕನ್ನಡ ಸಾಹಿತ್ಯ ಸಮ್ಮೇಳನ

ಧಾರವಾಡ: ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನವು ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವರ ಕಲಾ ಕೇಂದ್ರದಲ್ಲಿ ಸಂಭ್ರಮದಿಂದ ಜರಗಿತು. ಸಮ್ಮೇಳನ ಸರ್ವಾಧ್ಯಕ್ಷರಾಗಿ ಧರಣಿಂದ್ರ ಕುರುಕುರಿ ಆಗಮಿಸಿದ್ದರು.
ಇನ್ನು ಮೊದಲ ದಿನ ಸರ್ವಾಧ್ಯಕ್ಷರ ಮೆರವಣಿಗೆ ಸಾಗಿ ವಿವಿಧ ಕಲಾತಂಡಗಳೊಂದಿಗೆ ಕಲಾಮಂದಿರಕ್ಕೆ ಬಂದು ತಲುಪಿತು.
ಇನ್ನು ಎರಡು ದಿನಗಳ ಕಾಲ ಹಲವಾರು ಗೋಷ್ಠಿಗಳು ಅತ್ಯಂತ ಯಶಸ್ವಿಯಾಗಿ ಜರುಗಿದವು.

ಕೊನೆಯದಾಗಿ ಸಮಾರೋಪ ಸಮಾರಂಭ ಕಾರ್ಯಕ್ರಮ ಜರಗಿತು.‌ ಪ್ರೊಫೆಸರ್ ಎಸ್. ಜಿ .ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿ ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಸು ವಿಸ್ತಾರವಾಗಿ ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು.‌‌ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಧರಣೇಂದ್ರ ಕುರಕುರಿ ಅವರು ಮಾತನಾಡಿ ಕನ್ನಡ ತಾಯಿ ಸೇವೆಗಾಗಿ ಸದಾ ಕಾಲ ಅನಾನು ಸಿದ್ಧ ತಾಯಿ ಕನ್ನಡ ನಾಡು ನುಡಿಗಾಗಿ ಕೂಡ ಸದಾ ಕಾಲ ನನ್ನ ಸೇವೆ ಇದ್ದೇ ಇರುತ್ತದೆ ಮತ್ತು ನನ್ನನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ತಮ್ಮೆಲ್ಲರಿಗೂ ಕನ್ನಡ ಅಭಿಮಾನಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಅಧ್ಯಕ್ಷತೆಯ ಮಾತುಗಳನ್ನಾಡುತ್ತಾ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಸಾದಾ ಸಿದವಾಗಿ ನಡೆದುಕೊಂಡು ಬಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ಜರಗುವೆ ಎಲ್ಲ ಕಾರ್ಯಕ್ರಮಗಳಿಗೆ ಶ್ರಮಿಸಿದ ಮಾನ್ಯರಿಗೆ ಕನ್ನಡ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು. ಅಣ್ಣಿಗೇರಿಯ ಪ್ರಶಾಂತ್ ಹಂದಿಗೋಳು ಅವರು ತಮ್ಮ ಪತ್ನಿರಾದ ಗಂಗಾ ಪ್ರಶಾಂತ್ ಹಂದಿಗೋಳ್ ಇವರ ಹೆಸರಲ್ಲಿ ತಾಯಿಯಾದ ಶ್ರೀಮತಿ ಗಂಗಾ ರಾಮಭಟ್ ಹಂದಿಗೋಳ ದತ್ತಿ ನೀಧಿಯನ್ನು ನೀಡಿದರು ಬಳಿಕ ಜಿಲ್ಲಾ ಕ.ಸಾ.ಪ್ಪ ವತಿಯಿಂದ ಪ್ರಶಾಂತ್ ಭಟ್ ಹಂದಿಗೋಳ ದಂಪತಿಯನ್ನು ಸನ್ಮಾನಿಸಲಾಯಿತು.

ಇನ್ನು ಸಂಸ್ಕೃತಿಕ ಕಾರ್ಯಕ್ರಮದಗಳಲ್ಲಿ ಭಾಗವಹಿಸಿದ್ದ ಡಾ. ರಾಮು‌ ಮೋಲಿಗಿಯವರು ತಮ್ಮ ಜಾನಪದ ಗೀತೆಯೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಭಾಷ ನರೇಂದ್ರ ,ಶಶಿಧರ ಸಾಲಿ ,ಶಂಬಯ್ಯ ಹಿರೇಮಠ್, ಮಲ್ಲಯ್ಯಸ್ವಾಮಿ ತೋಟಗುಂಟಿಮಠ,ಗಂಗಾಧರ ದೊಡ್ಡವಾಡ ಉಪಸ್ಥಿತರಿದ್ದರು. ಇನ್ನು ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾವ್ಯ ಕಡಿಮೆ , ದೊರೈರಾಜ ಮಣಿಕುಂಟ್ಲಾ,ಉಮೇಶ್ ಕೌಜಗೇರಿ, ಪ್ರಕಾಶ್ ಹುಡಿಕೇರಿ, ಗೋವಿಂದ್ ಜೋಶಿ, ಶರಣಪ್ಪ ಕೋಟಿಗಿ, ರವಿರಾಜ್ ವರ್ಣೇಕರ, ಗುರುಸಿದ್ದಪ್ಪ ಬಡಿಗೇರ, ಲಲಿತಾ ಸಾಲಿಮಠ ಇನ್ನಿತರ ಉಪಸ್ಥಿತರಿದ್ದರು.

ಹುಬ್ಬಳ್ಳಿ ಜಿಲ್ಲಾ ಸಮ್ಮೇಳನದ ನಿರ್ಣಯಗಳು ೧. ಶಾಲಾ ಹಂತದ ಶಿಕ್ಷಣದಲ್ಲಿ, ಮಕ್ಕಳಲ್ಲಿ ಸೌಹಾರ್ದ ಸಂಬಂಧ, ಭಾವೈಕ್ಯತಾ ಮನೋಭಾವ ಬೆಳೆಸುವಂತಹ ಪಠ್ಯ ಪುಸ್ತಕಗಳನ್ನು ರಚನೆ ಮಾಡಬೇಕು. ೨. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಅಸ್ತಿತ್ವಕ್ಕೆ ಮಾನ್ಯತೆ ನೀಡುವ ಸಮಗ್ರ ಶಿಕ್ಷಣ ನೀತಿ ಜಾರಿಮಾಡಬೇಕು. ೩. ಗಡಿನಾಡ ಮತ್ತು ಹೊರನಾಡ ಕನ್ನಡಿಗರ ಮಕ್ಕಳಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು. ೪. ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಗಡಿನಾಡಿನಲ್ಲಿ ಕನ್ನಡ ಪ್ರತಿಯನ್ನು ಜಾಗೃತಗೊಳಿಸುವ ಸಾಲಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು.೫ಆದಿ ಕವಿ ಪಂಪ ಹುಟ್ಟೂರಾದ ಅಣ್ಣಿಗೇರಿಲೇ ಪಾಪ ಪ್ರಶಸ್ತಿ ನೀಡಬೇಕು ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಹಲವು ಸಾಧಕರನ್ನ ಸನ್ಮಾನಿಸುವುದರ ಜೊತೆಗೆ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾತಂಡಗಳಿಂದ ಅತ್ಯಂತ ಸುಂದರವಾಗಿ ಅಚ್ಚುಕಟ್ಟಾಗಿ ಜನಮನ ಸೂರೆಗೊಂಡವು. ಕಾವ್ಯವರಿಗೆ ಪ್ರಶಸ್ತಿ ನೀಡಲಾಯಿತು.

ಈರಪ್ಪ ಗುರಿಕಾರ್, tv8 ಕನ್ನಡ, ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button