ಅಣ್ಣಿಗೇರಿ ಅಮೃತೇಶ್ವರ ಟೆಂಪೋ ಚಾಲಕರ ಮತ್ತು ಮಾಲಕರ ನೂತನ ಸಂಘದ ಉದ್ಘಾಟನೆ
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಶ್ರೀ ಅಮೃತೇಶ್ವರ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಜರಗಿತು.
ವೇದಿಕೆ ಮೇಲಿದ್ದ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎನ್ .ಎಚ್.ಕೋನರೆಡ್ಡಿ ಮಾತನಾಡಿ ನಮ್ಮನ್ನ ಒಂದು ಊರಿನಿಂದ ಮತ್ತೊಂದು ಊರಿಗೆ ಸುರಕ್ಷಿತವಾಗಿ ತಲುಪಿಸಿ ಯಾವುದೇ ಜಾತಿ ಭೇದ ಭಾವ ಮಾಡದೆ ಕಾರ್ಯನಿರ್ವಹಿಸುವಂತಹ ಚಾಲಕರು ಮತ್ತು ಮಾಲಕರು ಎಂದು ಹೇಳಿದರು ನನ್ನ ಸಹಾಯ ಸಹಕಾರ ಸದಾ ಕಾಲ ಸಂಘಕ್ಕೆ ಇರುತ್ತದೆ ಎಂದು ಹೇಳಿದರು.
ಶ್ರೀ ಅಣ್ಣಿಗೇರಿ ರುದ್ರಮುನಿಶ್ವರ ದಾಸೋಹ ಮಠದ ಪೂಜಾ ಶಿವಕುಮಾರ ಮಹಾಸ್ವಾಮಿಜಿಯವರು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ ಟೆಂಪು ಚಾಲಕರ ಮತ್ತು ಮಾಲಕರ ಸಂಘ ಸಮಾಜಮುಕಿವಾಗಿ ಕಾರ್ಯನಿರ್ವಹಿಸಿ ತಾವು ಕೂಡ ಆರ್ಥಿಕವಾಗಿ ಸಬಲರಾಗುವಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಮೋರ್ಚಾ ಬಿಜೆಪಿ ಉಪಾಧ್ಯಕ್ಷ ಷಣ್ಮುಖಪ್ಪ ಗುರಿಕಾರ, ಶಿವಶಂಕರ ಕಲ್ಲೂರ,ಯಲ್ಲಪ್ಪ ಮೊರಬಸಿ,ಪುರಸಭೆ ಅಧ್ಯಕ್ಷ ರಜಿಯಾಬೇಗ ರೋಕದಕಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮೀ ಬಸವರಡ್ಡಿ ಜಕರಡ್ಡಿ,ಇಮಾಮಸಾಬ ದರವಾನ, ಟೆಂಪು ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಅಲ್ಲಂಪ್ರಭು ದಿಡ್ಡಿ, ಉಪಾಧ್ಯಕ್ಷ ಸಲಿಂ ಕುಡಚಿ,ಮುನ್ನಾ ಅಗಶಿಬಾಗಿಲ,ಮಾಬುಸಾಬ ಖುದ್ದಣ್ಣವರ, ಅಣ್ಣಿಗೇರಿ ಪೊಲೀಸ್ ಠಾಣೆ ಅಧಿಕಾರಿ ಕಿರಣ್ ಮೋಹಿತಿ,ಭಗವಂತಪ್ಪ ಪುಟ್ಟಣ್ಣ ವರ, ಇಬ್ರಾಹಿಂ ಅಸುಂಡಿ, ಹೆಸರು ಉಪಸ್ಥಿತರಿದ್ದರು.
ಈರಪ್ಪ ಗುರಿಕಾರ ಅಣ್ಣಿಗೇರಿ