ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ
ಗದಗ: ಬೆಟಗೇರಿ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೇಸಿಗೆ ಕಾಲ ಹಿನ್ನೆಲೆ ಗದಗ ನಗರದ ವಾರ್ಡ್ ಗಳಲ್ಲಿ ನೀರಿನ ಸಿಸಿ ಟ್ಯಾಂಕ್ ನಿರ್ಮಿಸಲಾಗಿದೆ ಆದರೂ ಹೆಸರಿಗೆ ಮಾತ್ರ ಎಂಬಂತಾಗಿದೆ.
ನೂರಕ್ಕೂ ಹೆಚ್ಚು ನೀರಿನ ಸಿಸಿ ಟ್ಯಾಂಕ್ ಹಾಳು ಬಿದ್ದಿದ್ದು ನೀರಿಲ್ಲದೆ ಜನರು ಪಡಬಾರದ ಪರಿಪಾಟಲು ಪಡ್ತಿದ್ದಾರೆ. ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕ ಮನವಿಯನ್ನು ಮಾಡಿದ್ದರು ಅಧಿಕಾರಿಗಳ ಮಾತ್ರ ಕ್ಯಾರೆ ಅಂತಿಲ್ಲ. ನೀರಿನ ಸಿಸಿ ಟ್ಯಾಂಕ್ ಗಳನ್ನು ರಿಪೇರಿಗೊಳಿಸಿದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಈವರೆಗೂ ನೀರಿಗೆ ಅನುಕೂಲ ಮಾಡಿಕೊಟ್ಟಿಲ್ಲ, ಈ ಹಿನ್ನೆಲೆ ಗದಗ ನಗರದ 32ನೇ ವಾರ್ಡಿನ ರೇಣುಕಾದೇವಿ ನಗರದಲ್ಲಿ ಕ್ರಾಂತಿ ಸೇನೆ ಹಾಗೂ ಸ್ಥಳೀಯರು ನೀರಿನ ಬಿಂದಿಗೆ ಹಿಡಿದು ನಗರಸಭೆ ಅಧಿಕ್ಕಾರಗಳಿಗೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೀರಿನ ಸಿಸಿ ಟ್ಯಾಂಕ್ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ, ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಮಿತ್ ಕಬಾಡಿ, ರಾಮ್ ನೀಲಗುಂದ, ವಿನೋದ್, ರಾಮ್, ವಿಜಯ್, ಹಾಗೂ ಕ್ರಾಂತಿ ಸೇನಾ ಅಧ್ಯಕ್ಷ ಬಾಬು ಬಾಕಳೆ ಹಾಗೂ ಕ್ರಾಂತಿ ಸೇನಾ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರದಿಪ ಬೆಳಮೇಗೌಡ, tv8 ಕನ್ನಡ, ಗದಗ