ಸದಾಶಿವ ಆಯೋಗ ಜಾರಿಗೆ ಶಿಫಾರಸ್ಸು ಮಾಡಿದ ಸರ್ಕಾರಕ್ಕೆ ಅಭಿನಂದನೆ
ಹೆಚ್.ಡಿ.ಕೋಟೆ: ಪಟ್ಟಣದ ಹಳೇ ತಾಲ್ಲೋಕು ಕಛೇರಿಯ ಸರ್ಕಲ್ ಬಳಿ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಪ್ರಧಾನಿ ನರೇಂದ್ರ ಮೋದಿ ರವರ ಭಾವಚಿತ್ರಹಿಡಿದು ಜೈಕಾರ ಕೂಗಿ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಮಾದಿಗ ಸಮುದಾಯದ ಮುಖಂಡ ಉಡ ನಾಗರಾಜು ಸುಮಾರು ಕಳೆದ ಮೂವತ್ತು ವರ್ಷಗಳ ಹೋರಾಟದ ಫಲವಾಗಿ ಹಿಂದು ಸದಾಶಿವ ಆಯೋಗ ವರದಿ ಜಾರಿಮಾಡುವುದಕ್ಕೆ ರಾಜ್ಯಸರ್ಕಾರ ಅನುಮೋದನೆ ನೀಡಿರುವು ಬಹಳ ಸಂತೋಷ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಪ್ರಧಾನಿ ನರೇಂದ್ರ ಮೋದಿ ರವರಿಗೆ ನಮ್ಮ ಸಮುದಾಯದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಬಗ್ಗೆ ಕಳಾಜಿ ಹೊಂದಿರುವ ಪಕ್ಷಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡನಾಗರಾಜು, ಚಾಮರಾಜು, ಮಹದೇವು, ಬೆಟ್ಟಸ್ವಾಮಿ, ಯಡತೊರೆ ಶಿವರಾಜು, ನಾಗೇಂದ್ರ, ರಾಜೇಂದ್ರ, ಬೂದನೂರು ರವೀಶ, ಶ್ರೀನಿವಾಸ, ಮಲ್ಲಯ್ಯ, ರಾಮು, ನಂಜುಂಡಿ, ನೂರಾರು ಮಾದಿಗ ಸಮುದಾಯದ ಮುಖಂಡರು ಹಾಜರಿದ್ದರು
ಮಲಾರ ಮಹದೇವಸ್ವಾಮಿ, tv8 ಕನ್ನಡ, ಹೆಚ್.ಡಿ.ಕೋಟೆ