ದಾವಣಗೆರೆ ಬಿಜೆಪಿ ಮಹಾಸಂಗಮ ಸಮಾವೇಶ: ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಬೆಳ್ಳಿ ಗಧೆ ಗಿಫ್ಟ್
ನಗರದಲ್ಲಿ ಇಂದು ಬಿಜೆಪಿಯಿಂದ ನಡೆದಂತ ವಿಜಯ ಸಂಕಲ್ಪ ಮಹಾ ಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳ್ಳಿ ಗಧೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಇಂದು ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಮಹಾಸಂಗಮ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ಭಾಗಿಯಾದಂತ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ವಿರುದ್ಧ, ಸಿದ್ಧರಾಮಯ್ಯ ವಿರುದ್ಧ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸಿದರು.
ಇಂದು ನಗರದಲ್ಲಿ ನಡೆದಂತ ಮಹಾಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಕಾಂಗ್ರೆಸ್ ವಿರುದ್ಧ ಗುಡುಗಿದರು. ಅಲ್ಲದೇ ಅಭಿವೃದ್ಧಿಯ ಮಂತ್ರವನ್ನು ಪಠಿಸಿದಂತ ಅವರು, ಬಿಜೆಪಿ ಸರ್ಕಾರಕ್ಕೆ ಮತ ನೀಡುವಂತೆಯೂ ಮನವಿ ಮಾಡಿದರು.
ದಾವಣಗೆರಯಲ್ಲಿ ನಡೆದಂತ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದಂತ ಅವರು, ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತೇನೆ. ಕರ್ನಾಟಕದ ಹುಲಿಗಳನ್ನು ನೋಡಲು ಬರುತ್ತೇನೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಹುಲಿ ಸಂರಕ್ಷಣಾ ದಿನಾಚರಣೆಯ ಪ್ರಯುಕ್ತ ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ಕರ್ನಾಟಕದ ಹುಲಿಗಳನ್ನು ನೋಡಲು ಬರುವೆ ಎಂಬುದಾಗಿ ತಿಳಿಸಿದರು.
ಪ್ರತಿ ಬಿಜೆಪಿ ಕಾರ್ಯಕರ್ತರು ನನ್ನ ಮಿತ್ರರು, ಸಹೋದರರು – ಪ್ರಧಾನಿ ಮೋದಿ
ಕರ್ನಾಟಕದ ಪ್ರತಿ ಬಿಜೆಪಿ ಕಾರ್ಯಕರ್ತರು ನನ್ನ ಮಿತ್ರರು ಹಾಗೂ ಸಹೋದರರು. ಯಾರು ಸಣ್ಣವರಲ್ಲ, ಯಾರು ದೊಡ್ಡವರಲ್ಲ. ಎಲ್ಲರೂ ಒಂದೇ ಎಂಬುದಾಗಿ ಹೇಳುವ ಮೂಲಕ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದಂತ ಸಿದ್ಧರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿಯವರು ಟಾಂಗ್ ನೀಡಿದ್ದಾರೆ.
ಇಂದು ದಾವಣಗೆರೆಯ ಜಿಎಂಐಟಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವಂತ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದಂತ ಅವರು, ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಮೇಯರ್, ಉಪ ಮೇಯರ್ ಎರಡು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಎಐಸಿಸಿ ಅಧ್ಯಕ್ಷ ತವರು ಕ್ಷೇತ್ರದಲ್ಲೇ ಬಿಜೆಪಿ ಜಯಭೇರಿ ಭಾರಿಸಿದೆ ಎಂದರು.
ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧವೂ ವಾಗ್ಧಾಳಿ ನಡೆಸಿದಂತ ಅವರು, ಯಾರು ಸಣ್ಣವರಲ್ಲ, ಯಾರು ದೊಡ್ಡವರಲ್ಲ. ಎಲ್ಲರೂ ಒಂದೇ. ಕರ್ನಾಟಕ ಪ್ರತಿಯೊಬ್ಬ ಕಾರ್ಯಕರ್ತರು ಸಹೋದರಿದಂತೆ, ಪ್ರತಿ ಬಿಜೆಪಿ ಕಾರ್ಯಕರ್ತ ನನ್ನ ಮಿತ್ರ, ಸಹೋದರ ಎಂಬುದಾಗಿ ಹೇಳುವ ಮೂಲಕ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡಿದ್ದಕ್ಕೆ ಟಾಂಗ್ ನೀಡಿದರು.
ಕರ್ನಾಟಕ ಅಭಿವೃದ್ಧಿಗೆ ಬಿಜೆಪಿಗೆ ಬಹುಮತ ನೀಡುವ ಕಾಲ ಬಂದಿದೆ. ಬಿಜೆಪಿಗೆ ಬಹುಮತ ನೀಡಿ, ಕರ್ನಾಟಕದ ಜನತೆ ಬಿಜೆಪಿಗೆ ಬಹುಮತ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಚುರುಕು ನೀಡುವಂತೆ ಜನತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.