ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ವಶಕ್ಕೆ
ಯಳಂದೂರು: ಪಟ್ಟಣದ ಬಳೆಪೇಟೆಯ ಐಸ್ ಫ್ಯಾಕ್ಟರಿ ರಸ್ತೆಯಲ್ಲಿರುವ ಗೋಡನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಯಳಂದೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಚಂದ್ರಹಾಸ ನಾಯಕ್ ರವರು ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 282 ಪಡಿತರ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದು 12,000ಕ್ಕೂ ಹೆಚ್ಚು ಕೆಜಿಯ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಒಮಿನಿ, ಗೂಡ್ಸ್ ವಾಹನ ಹಾಗೂ ಇಚರ್ ವಾಹನ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆರೋಪಿಗಳು ಪರಾರಿಯಾಗಿದ್ದು ಸೈಯದ್ ಅಹಮದ್ ಹಾಗೂ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಯಳಂದೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಂದ್ರಹಾಸ ನಾಯಕ್ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಬಿಸಲಯ್ಯ, ಪಿಎಸ್ಐ ಚಂದ್ರಹಾಸ ನಾಯಕ್,112 ಸಿಬ್ಬಂದಿಗಳಾದ ಶ್ರೀನಿವಾಸ್, ಮಹಾದೇವಸ್ವಾಮಿ, ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಮೂರ್ತಿ,ನಾಗೇಂದ್ರ,ರಂಗಸ್ವಾಮಿ, ಮಹೇಶ್,ಚಾಲಕ ಸೋಮಶೇಖರ್, ಹಾಜರಿದ್ದರು.
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ8 ಕನ್ನಡ, ಯಳಂದೂರು