ಗದಗ ಗದಗ ಜನತೆಯ ಮೆಚ್ಚುಗೆಗೆ ಪಾತ್ರವಾದ ಗದಗ ಪೋಲಿಸ್ ವರಿಷ್ಠಾಧಿಕಾರಿ ನೇಮಗೌಡ
ಇನ್ನು ಬೇಸಿಗೆ ಕಾಲ ಪ್ರಾರಂಭಿಕ ಹೊಸ್ತಿಲಲ್ಲಿ ಗದಗ ಜನತೆ ಬಿಸಿಲಿನ ಬೇಗೆಗೆ ಹೈರಾಣಾಗಿದ್ದಾರೆ ಯಾಕೆಂದರೆ ಎಲ್ಲೆಡೆ ಧಗಧಗಿಸುವ ರಣ ಬಿಸಿಲೂ ಮತ್ತೊಂದುಡೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತು ಹೈರಾಣಾಗುತ್ತಿರುವ ಜನರು, ಈ ಸಿಗ್ನಲ್ಗಳ ಕೆಳಗೆ ಒಂದೇ ಒಂದು ಇಂಚಿನಷ್ಟು ನೆರಳಿಲ್ಲ ಈ ಬಿಸಿಲಿನ ಬೇಗೆಗೆ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಸಾಗುತ್ತಿದ್ದ ಜನರು, ಇದನ್ನು ಅರಿತ ಗದಗ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ನೆಮಗೌಡರವರು ಜನರಿಗೆ ಈ ಸಿಗ್ನಲ್ ಗಳಲ್ಲಿ ನಿಲ್ಲಲು ಅನುಕೂಲವಾಗುವಂತೆ ನಗರದ ಮುಳಗುಂದ ನಾಕಾ ಸಿಗ್ನಲ್ ಗಳಲ್ಲಿ ಗದಗ ಬೆಟಗೇರಿ ನಗರಸಭೆ ಸಂಯೋಗದೊಂದಿಗೆ ನಾಲ್ಕು ಕಡೆ ಕಬ್ಬಿಣದ ಪಿಲ್ಲರ್ ನಿರ್ಮಿಸಿ ಹಸಿರು ಹೊದಿಕೆಯ ನರ್ಸರಿ ತಾಡ್ಪಲ ಹಾಕಿ ನೆರಳೂ ವ್ಯವಸ್ಥೆ ಮಾಡಿದ್ದಾರೆ, ಇದರಿಂದ ಜನರು ಸಿಗ್ನಲ್ ಗಳಲ್ಲಿ ಸ್ವಲ್ಪ ಮಟ್ಟಿಗೆ ನೆರಳಲ್ಲಿ ನಿಂತು ಹೋಗುವಂತೆ ಅನುಕೂಲ ಮಾಡಲಾಗಿದೆ, ಇದರಿಂದ ಜನರು ಮಾನ್ಯ ಗದಗ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ನೆಮಗೌಡರವರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಅವರು ಈ ಮುಂಚೆ ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿದ ಸಂದರ್ಭದಲ್ಲಿ ವಿಜಯಪುರದ ಹೃದಯಭಾಗದಲ್ಲಿ ಜನರಿಗೆ ಇದೆ ರೀತಿ ಬಿಸಿಲಿನ ಬೇಗೆಯಿಂದ ತಪ್ಪಿಸಲು ಈ ರೀತಿ ಹಸಿರು ಹೊದಿಕೆಯ ನರ್ಸರಿ ತಾಡ್ಪಲ ಹಾಕಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದನ್ನು ಸ್ಮರಿಸಿ ಈ ರೀತಿ ಒಂದು ಒಳ್ಳೆಯ ಕಾರ್ಯಕ್ಕೆ ಮುಂದಾಗಿದ್ದಾರೆ ಅದೇ ರೀತಿ ಮುಂಬರುವ ದಿನಗಳಲ್ಲಿ ನಗರದ ಇನ್ನೂ ಕೆಲವು ಸಿಗ್ನಲ್ ಗಳಲ್ಲಿ ಇದೆ ರೀತಿ ನಿರ್ಮಿಸಲು ಸೂಚಿಸಿದ್ದಾರೆ, ಇದರ ಜತೆಗೆ ಸಾರ್ವಜನಿಕರ ಕಳೆದುಹೋಗಿ ಬ್ಲಾಕ್ ಮಾಡಲಾಗಿದ್ದ ಮೊಬೈಲಗಳನ್ನು CEIR Web Portal ಮೂಲಕ ದಾಖಲಿಸಿ ಗದಗ ಜಿಲ್ಲಾ ಪೊಲೀಸ್ ಘಟಕಕ್ಕೆ ವರದಿಮಾಡಿದ್ದ ಮೊಬೈಲಗಳನ್ನು ಪತ್ತೆ ಹಚ್ಚಿ ಮರಳಿಸಲು. Web Portal ಪ್ರಾರಂಭಿಸಿ, ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಮೊಬೈಲಗಳನ್ನು ಪತ್ತೆ ಹಚ್ಚಿ ಒಳ್ಳೆಯ ಫಲಿತಾಂಶವನ್ನು ನೀಡಿರುವುದು ಸಾರ್ವಜನಿಕರ ಪ್ರಶಾಂಸೆಗೆ ಪಾತ್ರವಾಗಿದ್ದಾರೆ. ಇದರ ಜೊತೆಗೆ ಪೊಲೀಸ್ ಇಲಾಖೆ ಸಾರ್ವಜನಿಕರ ಜೊತೆ ಸ್ನೇಹಜೀವಿಯಾಗಿದೆ ಎಂದು ಹೇಳಿದ್ದಾರೆ.
ಪ್ರದೀಪ್ ಬೆಳಮೇಗೌಡ, tv8 ಕನ್ನಡ,
https://youtu.be/e4w900rQQS8